Bengaluru : ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೇ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ಸಿಗುತ್ತಿದೆ.

Bengaluru : ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯದ ಸೌಲಭ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Viral ಆದ ಬೆನ್ನಲ್ಲೇ ದರ್ಶನ್ (Darshan) ಆಪ್ತ ಗೆಳೆಯ ನಟ ಧನ್ವೀರ್ಗೆ (Dhanveer) ಈಗ ಸಂಕಷ್ಟ ಎದುರಾಗಿದೆ.
ಸಿಸಿಬಿ ಕಣ್ಣಿನಲ್ಲಿ ನಟ ಧನ್ವೀರ್
ಇನ್ನು ವಿಡಿಯೋ ಬಿಡುಗಡೆಯಾದ ಪ್ರಕರಣ ಪೊಲೀಸ್ ಇಲಾಖೆಗೆ ಮುಜುಗರ ತಂದ ಬೆನ್ನಲ್ಲೇ ಸಿಸಿಬಿ ಪೊಲೀಸರು (CCB Police) ಈಗ ಧನ್ವೀರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮೊಬೈಲ್ ವಶಕ್ಕೆ
ಭಾನುವಾರದಿಂದಲೇ CCB ಪೊಲೀಸರು ಧನ್ವೀರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅವರ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಅದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (Forensic Lab) ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನು ಓದಿ : Weather Report : ರಾಜ್ಯದಲ್ಲಿ ಕಡಿಮೆಯಾಯ್ತು ಮಳೆ ಅಬ್ಬರ

ಸಿಸಿಬಿ ವಶದಲ್ಲೇ ಧನ್ವೀರ್
ಇಂದು ಕೂಡ ಧನ್ವೀರ್ ಸಿಸಿಬಿ ವಶದಲ್ಲೇ ಇದ್ದಾರೆ ಎಂಬಯಿದೆ. ಅಧಿಕಾರಿಗಳು ಅವರಿಂದ ವಿಡಿಯೋ ಮೂಲ ಹಾಗೂ ಸಂಪರ್ಕಗಳ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ದರ್ಶನ್ ಪರ ವಕೀಲರಿಂದ ವಾದ
ಇನ್ನು ದರ್ಶನ್ಗೆ ಜೈಲಿನಲ್ಲಿ ದಿಂಬು ಮತ್ತು ಹಾಸಿಗೆ ನೀಡಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ದರ್ಶನ್ ಪರ ವಕೀಲರು, “ಇತರ ಕೈದಿಗಳಿಗೆ ವಿಶೇಷ ಸವಲತ್ತುಗಳು ದೊರೆಯುತ್ತಿವೆ, ಆದರೆ ದರ್ಶನ್ಗೆ ನೀಡಲಾಗುತ್ತಿಲ್ಲ” ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.

ಇದನ್ನು ನೋಡಿ : ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಬರಲ್ಲ ಪಾಕಿಸ್ತಾನ್ ತಂಡ




