BBK : ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಂದಿದ್ದಾರೆ. ಕೊನೆ ಘಳಿಗೆಯಲ್ಲಿ ತಾನು ಬಯಸಿದಂತೆಯೇ ಮನೆಯಿಂದ ಔಟ್ ಆಗಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಿಂದ ಚಂದ್ರಪ್ರಭ (Chandra Prabha) ಹೊರಬಂದಿದ್ದಾರೆ. ಕೊನೆ ಘಳಿಗೆಯಲ್ಲಿ ತಾನು ಬಯಸಿದಂತೆಯೇ ಮನೆಯಿಂದ ಔಟ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರು. ಕಿಚ್ಚನ ಪಂಚಾಯ್ತಿ ವೇಳೆ ಸುದೀಪ್ ಅವರು Vote ಆಧಾರವಾಗಿ ಒಬ್ಬೊಬ್ಬರನ್ನು ಸೇವ್ ಮಾಡುತ್ತಾ ಬಂದರು. ಕೊನೆಯಲ್ಲಿ ಕಾಕ್ರೋಚ್ ಸುಧಿ ಮತ್ತು ಚಂದ್ರಪ್ರಭ ಮಾತ್ರ ಉಳಿದುಕೊಂಡಿದ್ದರು.
ಇದನ್ನು ಓದಿ : BBK S12 : ಓವರ್ ಕಾನ್ಫಿಡೆನ್ಸ್ನಿಂದ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಗಿಲ್ಲಿ ನಟ?

ಕಾಕ್ರೋಚ್ ಸುಧಿ ಸ್ಪೆಷಲ್ ಪವರ್ನಿಂದ ಸೇವ್
ಎಲಿಮಿನೇಷನ್ ಭೀತಿಯಲ್ಲಿದ್ದ ಕಾಕ್ರೋಚ್ ಸುಧಿ ತಮ್ಮ ಬಳಿ ಇರುವ Special Power ಬಳಸಿಕೊಂಡು ತಮನ್ನು ಸೇವ್ ಮಾಡಿಕೊಂಡರು. ಅದರ ಪರಿಣಾಮವಾಗಿ, ಚಂದ್ರಪ್ರಭ ಹೊರಬರಬೇಕಾಯಿತು.
ಕಿಚ್ಚನ ಪಂಚಾಯ್ತಿಯಲ್ಲಿ ಚಂದ್ರಪ್ರಭನ ಡಲ್
ಪಂಚಾಯಿತಿ ವೇಳೆ ಚಂದ್ರಪ್ರಭ ತುಂಬಾ ಡಲ್ ಆಗಿದ್ದರು. ಸುದೀಪ್ ಅವರೊಂದಿಗೆ ಮಾತನಾಡುವ ವೇಳೆ ಏಕಾಏಕಿ ಎದ್ದು ಹೊರನಡೆದರು. ಈ ನಡೆಗೆ ಸ್ಪರ್ಧಿಗಳು ಶಾಕ್ ಆಗಿ, ನಂತರ ಮನವೊಲಿಸಿ ಅವರನ್ನು ಮನೆಯೊಳಗೆ ಕರೆತಂದರು.

ರಿಷಾ ವಿವಾದದ ಕುರಿತು ಚರ್ಚೆ
ಇನ್ನು ಗಿಲ್ಲಿ ಮೇಲೆ ಕೈಮಾಡಿದ ಘಟನೆಗೆ ಸಂಬಂಧಿಸಿದಂತೆ ರಿಷಾ ಅವರನ್ನು ಮನೆಯಲ್ಲಿ ಉಳಿಸಬೇಕೇ ಬೇಡವೇ ಎಂಬ ಕುರಿತು ಬಿಗ್ ಬಾಸ್ ಸ್ಪರ್ಧಿಗಳ ಅಭಿಪ್ರಾಯ ಕೇಳಿದರು. ಈ ಸಂದರ್ಭದಲ್ಲಿ ಸುದೀಪ್ ಅವರು ಚಂದ್ರಪ್ರಭಗೆ “ಯಾಕೆ ಹೊರಹೋಗಿದ್ದು?” ಎಂದು ಪ್ರಶ್ನೆ ಮಾಡಿದರು.
ಚಂದ್ರಪ್ರಭ ಅವರ ಪ್ರತಿಕ್ರಿಯೆ
ಅದಕ್ಕೆ ಚಂದ್ರಪ್ರಭ, “ನನಗೆ ಮನೆಯಲ್ಲಿ ಇರೋದಕ್ಕೆ ಇಷ್ಟ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದರು. ಅದಕ್ಕೆ ಸುದೀಪ್ ಅವರು, “ಇದನ್ನು ನಾವು ತೀರ್ಮಾನಿಸಲ್ಲ, ಜನರಿಗೆ ನೀವು ಇಷ್ಟ ಆಗಲಿಲ್ಲ ಅಂದ್ರೆ ಅವರೇ ಹೊರಗೆ ಕಳಿಸುತ್ತಾರೆ” ಎಂದು ಸಮಾಧಾನಪಡಿಸಿದ್ದರುಆದರೆ, ಕೊನೆಗೆ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ.

ಇದನ್ನು ನೋಡಿ : ಬೆಳಗಾವಿ ಡಿಸಿಸಿ ಅಖಾಡಕ್ಕೆ ಸಿಎಂ ಎಂಟ್ರಿ – ಇಕ್ಕಟ್ಟಿಗೆ ಸಿಲುಕಿದ ಉಭಯ ಬಣ




