Kodagu Death : ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್ಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

Kodagu Death : ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್ಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೋಷಕರು ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿನೋದ್ (34) ಮೃತ ದುರ್ದೈವಿ.
ಘಟನೆಯ ವಿವರ
ಮೃತ ವಿನೋದ್ ಸುಂಟಿಕೊಪ್ಪದ ನಿವಾಸಿಯಾಗಿದ್ದ. ಸೊಂಟ ನೋವು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪಟ್ಟಣದಲ್ಲಿರುವ ಉಮಾ ಕ್ಲಿನಿಕ್ಗೆ ತೆರಳಿದ್ದರು. ಅಲ್ಲಿನ ವೈದ್ಯೆ ಯಶೋಧರ ಪೂಜಾರಿ ಎಂಬುವವರು ಅವರಿಂದ ಚಿಕಿತ್ಸೆ ನೀಡಲಾಗಿತ್ತು. ಮನೆಗೆ ಬಂದ ಬಳಿಕ ವಿನೋದ್ ತೀವ್ರ ಅಸ್ವಸ್ಥಗೊಂಡಿದ್ದು, ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾನೆ.
ಇದನ್ನು ಓದಿ : Kitchen Tips : ರುಚಿಕರವಾದ ಅಕ್ಕಿ ಪಾಯಸ ಮಾಡುವ ವಿಧಾನ
ಪೋಷಕರಿಂದ ಆರೋಪ
ವಿನೋದ್ ಪೋಷಕರು ಮಗನ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿದ್ದಾರೆ. ಚಿಕಿತ್ಸೆ ಸಮಯದಲ್ಲಿ ಎರಡು ಬಾರಿ ಇಂಜೆಕ್ಷನ್ ನೀಡಲಾಗಿದ್ದು, ಇದರಿಂದ ತೀವ್ರ ಅಸ್ವಸ್ಥತೆ ಉಂಟಾಗಿತ್ತು ಎಂದು ತಿಳಿಸಿದ್ದಾರೆ. ವೈದ್ಯರ ಯಡವಟ್ಟಿನಿಂದ ಯುವಕ ಮೃತಪಟ್ಟಿರುವುದಾಗಿ ಪೋಷಕರು ತಿಳಿಸಿದ್ದಾರೆ
ಹೆದ್ದಾರಿ ತಡೆ ಮತ್ತು ಪ್ರತಿಭಟನೆ
ವಿನೋದ್ ನಿಧನದ ನಂತರ ಸಂಬಂಧಿಕರು ಮತ್ತು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜೀವಹಾನಿಗೆ ಸಂಬಂಧಿಸಿದಂತೆ ಆಸ್ಪತ್ರೆಯು 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆಗ್ರಹದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 275 ಬಂದ್ ಮಾಡುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣ ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನು ನೋಡಿ : ಎನ್ ಕೌಂಟರ್ ಸ್ಪೆಷಲಿಸ್ಟ್ ಎಂಬುದೇ ಬಂಡವಾಳ, ಜನರನ್ನು ಬೆದರಿಸಿ ಗಳಿಸಿದ್ದು 92 ಕೋಟಿ ರೂ.! ಯುಪಿ ಡಿವೈಎಸ್ಪಿ ಶುಕ್ಲಾ ಕರಾಮತ್ತು!




