Kheer Recipe : ಹಬ್ಬ ಬಂತೆಂದರೆ ಮನೆಯಲ್ಲಿ ಪಾಯಸ ಮಾಡುವುದು ಫಿಕ್ಸ್. ಶಾವಿಗೆ ಪಾಯಸ, ಹೆಸರು ಬೇಳೆ ಪಾಯಸ, ಸಬ್ಬಕ್ಕಿ ಪಾಯಸ, ಗೋಧಿ ಪಾಯಸ ಹೀಗೆ ಒಬ್ಬೊಬ್ಬರ ಮನೆಯಲ್ಲಿ ಒದೊಂದು ರೀತಿಯ ಪಾಯಸ ಮಾಡುತ್ತಾರೆ.

ಹೆಸರು ಬೇಳೆ ಪಾಯಸ, ಸಬ್ಬಕ್ಕಿ ಪಾಯಸ, ಗೋಧಿ ಪಾಯಸ ಹೀಗೆ ಒಬ್ಬೊಬ್ಬರ ಮನೆಯಲ್ಲಿ ಒದೊಂದು ರೀತಿಯ ಪಾಯಸ ಮಾಡುತ್ತಾರೆ.
ರುಚಿಕರವಾದ ಅಕ್ಕಿ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
ಹಾಲು– 1 ಲೀಟರ್
ತೊಳೆದು ನೆನೆಸಿದ ಅಕ್ಕಿ – ಅರ್ಧ ಬಟ್ಟಲು
ಸಕ್ಕರೆ– ಅರ್ಧ ಬಟ್ಟಲು
ಏಲಕ್ಕಿ ಪುಡಿ– ಅರ್ಧ ಚಮಚ
ಕೇಸರಿ ದಳಗಳು– ಚಿಟಿಕೆ
ಕತ್ತರಿಸಿದ ಬಾದಾಮಿ – 2 ಚಮಚ
ಕತ್ತರಿಸಿದ ಪಿಸ್ತಾ – 2 ಚಮಚ
ಇದನ್ನು ಓದಿ : ಉಡುಪಿಯಲ್ಲಿ ನೆರವೇರಿದ KGF ಚಾಚಾ ಹರೀಶ್ ರಾಯ್ ಅಂತ್ಯಸಂಸ್ಕಾರ
ಮಾಡುವ ವಿಧಾನ
ಮೊದಲಿಗೆ ಒಂದು ಪ್ಯಾನ್ನಲ್ಲಿ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿ. ನಂತರ ತೊಳೆದು ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ, ಅಕ್ಕಿ ಮೃದುವಾಗುವವರೆಗೆ ಮತ್ತು ಹಾಲು ದಪ್ಪವಾಗುವವರೆಗೆ ಬೇಯಿಸಿ. ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇನ್ನು ಸಕ್ಕರೆ ಕರಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಲು ಮುಂದುವರಿಸಿ. ನಂತರ ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಫ್ರಿಜ್ನಲ್ಲಿ 1–2 ಗಂಟೆಗಳ ಕಾಲ ಇಡಿ. ಬಳಿಕ ಬಾದಾಮಿ ಮತ್ತು ಪಿಸ್ತಾದಿಂದ ಅಲಂಕರಿಸಿದರೆ ರುಚಿಕರ ಅಕ್ಕಿ ಪಾಯಸ ಸವಿಯಲು ಸಿದ್ಧ.
ಇದನ್ನು ನೋಡಿ : Kamal Haasan: ಬರೋಬ್ಬರಿ ಏಳು ಬಾರಿ ಆಸ್ಕರ್ಗೆ ನಾಮಿನೇಟ್ ಆಗಿದ್ದ ಆ ನಟ ಯಾರು ಗೊತ್ತಾ?




