Kodagu ಜಿಲ್ಲೆಯ ಸೋಮವಾರಪೇಟೆ ಬಳಿ ರಾತ್ರಿ ವೇಳೆ 12 ರಿಂದ 13 ಅಡಿ ಉದ್ದದ ದೈತ್ಯ ಹೆಬ್ಬಾವು ರಸ್ತೆ ದಾಟಿದ ದೃಶ್ಯ ವೈರಲ್ ಆಗಿದೆ. ವಾಹನ ಸವಾರರು ಆತಂಕಗೊಂಡ ಘಟನೆ ವಿವರ ಇಲ್ಲಿದೆ.

Kodagu ಜಿಲ್ಲೆಯ Somwarpet ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ದೈತ್ಯ ಹೆಬ್ಬಾವು ರಸ್ತೆ ದಾಟಿದ ದೃಶ್ಯ ವೈರಲ್ ಆಗಿದೆ.
ಸಜ್ಜಳ್ಳಿ – ಯಡವನಾಡು ಸಂಪರ್ಕ ರಸ್ತೆಯ ಚೈನ್ಗೇಟ್ ಸಮೀಪ ಈ ಘಟನೆ ನಡೆದಿದ್ದು, ವಾಹನ ಸವಾರರು ಕೆಲಕಾಲ ಆತಂಕಗೊಂಡರು. ಯಡವಾರೆ ಗ್ರಾಮದ ನಿವಾಸಿ ಹಾಗೂ ಕಾಫಿ ಬೆಳೆಗಾರ ಪ್ರಕಾಶ್ ಬೆಳ್ಳಿಯಪ್ಪ ಅವರು ಕುಟುಂಬ ಸಮೇತ ಜೀಪಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ಮಧ್ಯೆ ಹೆಬ್ಬಾವು ಹರಿಯುತ್ತಿರುವುದು ಕಂಡುಬಂದಿದೆ.
MUST READ : Siddaramaiah ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್..!!

ಸುಮಾರು 12 ರಿಂದ 13 ಅಡಿ ಉದ್ದದ ಹೆಬ್ಬಾವು ನಿಧಾನವಾಗಿ ರಸ್ತೆ ದಾಟಿ ಅರಣ್ಯದೊಳಗೆ ತೆರಳಿದೆ. ಈ ಅಪರೂಪದ ದೃಶ್ಯವನ್ನು ಪ್ರಕಾಶ್ ಬೆಳ್ಳಿಯಪ್ಪ ಅವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಘಟನೆ ಬಳಿಕ ಸುತ್ತಮುತ್ತಲಿನ ಕಾಫಿ ತೋಟದ ಕಾರ್ಮಿಕರು ಹಾಗೂ ಮಾಲೀಕರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
MUST WATCH : ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ಇನ್ನಿಲ್ಲ




