ಒಟಿಟಿಯಲ್ಲಿ ಬರಲಿದೆ ಧ್ರುವ ಸರ್ಜಾ ನಟನೆಯ KD ಸಿನಿಮಾ – ಎಲ್ಲಿ, ಯಾವಾಗ?

ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ KD ಇದೀಗ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಜೂನ್ 5ರಿಂದ ZEE5 ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.
ನಾಲ್ಕು ಭಾಷೆಗಳಲ್ಲಿ ಬರಲಿದೆ ಕೆಡಿ
ಏಪ್ರಿಲ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಕೆಡಿ-ದಿ ಡೆವಿಲ್’ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಏಕಕಾಲಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಹೀಗಾಗಿ ಥಿಯೇಟರ್ನಲ್ಲಿ ಸಿನಿಮಾ ನೋಡಲು ಸಾಧ್ಯವಾಗದ ಸಿನಿಪ್ರಿಯರು ಈಗ ಮನೆಯಲ್ಲೇ ಕುಳಿತು ಈ ಆಕ್ಷನ್ ಎಂಟರ್ಟೈನರ್ ಅನ್ನು ವೀಕ್ಷಿಸಬಹುದಾಗಿದೆ.

70ರ ದಶಕದ ಭೂಗತ ಲೋಕದ ಕಥಾಹಂದರ
1970ರ ದಶಕದ ಬೆಂಗಳೂರಿನ ಭೂಗತ ಜಗತ್ತಿನ ಕಥೆಯನ್ನು ಆಧರಿಸಿ ನಿರ್ದೇಶಕ ಪ್ರೇಮ್ ಈ ಚಿತ್ರವನ್ನು ರೂಪಿಸಿದ್ದಾರೆ. ‘ಕಾಳಿದಾಸ’ ಅಲಿಯಾಸ್ ಕೆಡಿ ಎಂಬ ಯುವಕನ ಜೀವನ, ಅಣ್ಣ-ತಮ್ಮನ ನಡುವಿನ ಬಾಂಧವ್ಯ, ಸೇಡು ಹಾಗೂ ರಾಜಕೀಯ ಪೈಪೋಟಿಯ ಸುತ್ತ ಕಥೆ ಸಾಗುತ್ತದೆ. ಧ್ರುವ ಸರ್ಜಾ ಅವರ ರಫ್ & ರಗಡ್ ಲುಕ್, ಮಾಸ್ ಆಕ್ಷನ್ ದೃಶ್ಯಗಳು ಹಾಗೂ ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.
ಅದ್ದೂರಿ ತಾರಾಬಳಗ
ಇನ್ನು ಈ ಚಿತ್ರದಲ್ಲಿ ದಕ್ಷಿಣ ಹಾಗೂ ಬಾಲಿವುಡ್ ಚಿತ್ರರಂಗದ ಹಲವಾರು ಖ್ಯಾತ ಕಲಾವಿದರು ನಟಿಸಿದ್ದಾರೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ರೀಷ್ಮಾ ನಾಣಯ್ಯ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜೊತೆಗೆ ಅಭಿನಯ ಚಕ್ರವರ್ತಿ ಸುದೀಪ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷವಾಗಿದೆ.
ಇದನ್ನು ಓದಿ : ʻಕಾಂತಾರʼ ದೈವಕ್ಕೆ ಅಪಮಾನ – ತಲೆಬಾಗಿ ರಣವೀರ್ ಸಿಂಗ್ ಕ್ಷಮೆಯಾಚನೆ

KD ಚಿತ್ರವನ್ನ ಇನ್ಮೇಲೆ ಮನೆಯಲ್ಲೇ ನೋಡಿ!
ಈ ಚಿತ್ರವನ್ನು ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ KVN PRODUCTONS ಅದ್ಧೂರಿಯಾಗಿ ನಿರ್ಮಿಸಿದೆ.
‘ಕೆಡಿ-ದಿ ಡೆವಿಲ್’ ಒಟಿಟಿ ಬಿಡುಗಡೆಯ ಮೂಲಕ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆಯುವ ನಿರೀಕ್ಷೆಯಿದೆ.

ಇದನ್ನು ನೋಡಿ : ಮಳೆ ಅಬ್ಬರಕ್ಕೆ ಕಾಂಪೌಂಡ್ ಗೋಡೆ ಕುಸಿತ ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ




