Murder : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

Murder : ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದ ಗಿರೀಶ್ (ವಯಸ್ಸು 43) ಎಮಬ ವ್ಯಕ್ತಿ ಬರ್ಬರ ಹತ್ಯೆಗೆ ಒಳಗಾಗಿದ್ದಾರೆ. ಹಾಲು ಡೇರಿ ನಡೆಸುತ್ತಿದ್ದ ಗಿರೀಶ್ ಅವರನ್ನು ರಮೇಶ್ (ವಯಸ್ಸು 28) ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಘಟನೆ ವಿವರಗಳು
ಸ್ಥಳೀಯ ವರದಿಗಳ ಪ್ರಕಾರ, ಆರೋಪಿಯು ಮದ್ಯಪಾನದ ಅತಿಯಾದ ಪರಿಣಾಮದಿಂದ ಗ್ರಾಮಸ್ಥರೊಂದಿಗೆ ಜಗಳ ಆರಂಭಿಸಿದ್ದಾನೆ. ಗಿರೀಶ್ ಅವರು “ಯಾಕೆ ಮದ್ಯದ ನಶೆಯಲ್ಲಿ ಬಂದು ಜಗಳ ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ ಹಿನ್ನೆಲೆ, ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ಇದನ್ನು ಓದಿ : ಕಾವು ಜೊತೆ ಸೂರಜ್ ಡ್ಯಾನ್ಸ್ ಹೇಗಿತ್ತು ಗೊತ್ತಾ? ಕಿಚ್ಚನ ಮುಂದೆ ಅಸಲಿ ಕಹಾನಿ ಬಿಚ್ಚಿಟ್ಟ ಗಿಲ್ಲಿ
ಇನ್ನು ಈ ವಾಗ್ವಾದದ ನಂತರ ರಮೇಶ್ ಆಕ್ರೋಶಗೊಂಡು ಗಿರೀಶ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ತನಿಖೆ ಆರಂಭ
ಇನ್ನು ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸುವ ಹಾಗೂ ಹತ್ಯೆ ಸಂದರ್ಭದ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಇನ್ನು ಈ ಘಟನೆ ಗ್ರಾಮದಲ್ಲಿ ಆತಂಕವನ್ನು ಹುಟ್ಟಿಸಿದೆ.
ಇದನ್ನು ನೋಡಿ : ಅರಸೀಕೆರೆ | ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ




