BBK : ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಹಾಗೂ ಗಿಲ್ಲಿ ಜೋಡಿಯೇ ಪ್ರಮುಖ ಹೈಲೈಟ್. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಕಳೆದ ವಾರ ಸೂರಜ್ ಮತ್ತು ಕಾವ್ಯ ಡ್ಯಾನ್ಸ್ ಪ್ರ್ಯಾಕ್ಟಿಸ್ ಕಂಡು ಗಿಲ್ಲಿ ಸಖತ್ ಉರಿದುಕೊಂಡಿದ್ದರು.

BBK : ಬಿಗ್ ಬಾಸ್ ಸೀಸನ್ 12 (Bigg Boss Kannada 12) ಕುತೂಹಲ ಘಟ್ಟ ತಲುಪಿದೆ. ಕಾವ್ಯ ಮತ್ತು ಸೂರಜ್ ಡ್ಯಾನ್ಸ್ ಮಾಡುವಾಗ ಗಿಲ್ಲಿಗೆ ʻಸ್ವಲ್ಪ ಹಾಗೇ ಹೀಗೆ ಆಗಿತ್ತು ಅಲ್ವ?ʼ ಅಂತ ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದಾರೆ.
“ಸತ್ಯ, ಅವರಿಬ್ಬರ ಡ್ಯಾನ್ಸ್ ರೊಮ್ಯಾಂಟಿಕ್ ಸಾಂಗ್ ತರ ಇರಲಿಲ್ಲ. ಅದು ಜಲ್ಲಿ ಕಟ್ಟು ಗೂಳಿ ಹಿಡಿಯುತ್ತಾರಲ್ಲ ಹಾಗೇ ಹಾಗೆ ಇತ್ತು” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಇದನ್ನ ನೋಡಿ : ನ.7 ಕ್ಕೆ ತುಮಕೂರಿಗೆ ಬರ್ತಾರೆ CM
ಕಾವ್ಯಾ ತನ್ನ ಪ್ರ್ಯಾಕ್ಟಿಸ್ ಹಾಳಾಗಿ ಹೋಯಿತೆಂದು ಸಹ ಹೇಳಿದರು. ಸುದೀಪ್ ಗಿಲ್ಲಿಗೆ „ಏನಾದರೂ ಸಹಾಯ ಬೇಕಿದ್ದರೆ ಮಾಡಬೇಕು ತಾನೆ?“ ಎಂದು ಕೇಳಿದಾಗ, ಗಿಲ್ಲಿ: „ನನ್ನ ಗುಂಡಿ ನಾನೇ ತೋಡಿಕೊಳ್ಳಾನಾ?“ ಹೇಳಿದ್ದಾರೆ.
ಇನ್ನು ಅಶ್ವಿನಿ ಸ್ಪರ್ಧಿ ಗಿಲ್ಲಿಯ ಹಾಸ್ಯಮಯ ನಗು ನೋಡಿ „ನನಗೂ ತುಂಬಾ ಖುಷಿ ಆಯ್ತು“ ಎಂದಿದ್ದಾರೆ. ಈ ಘಟನೆ ಮನೆ ಒಳಗಿನ ಸ್ನೇಹ, ಹಾಸ್ಯ ಮತ್ತು ಡ್ರಾಮಾ ಸಂಭಾಷಣೆಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ಕ್ಷಣ ನೀಡಿದೆ.
ಇದನ್ನು ಓದಿ : ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ – ಎಂ.ಸಿ. ಸುಧಾಕರ್




