M.C Sudhakar : ಸಚಿವ ಎಂ.ಸಿ. ಸುಧಾಕರ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳೂ ಇದೆ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ ಮಾಜಿ ಸಚಿವ ಎಂ.ಸಿ. ಸುಧಾಕರ್ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಯಾವುದೇ ಕ್ರಾಂತಿ ಇಲ್ಲ, ಭ್ರಾಂತಿ ಮಾತ್ರ
“ಯಾವ ಕ್ರಾಂತಿಯೂ ಇಲ್ಲ, ಬರೀ ಭ್ರಾಂತಿ ಅಷ್ಟೆ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಬಿಹಾರ ಚುನಾವಣೆಯ ಕಡೆ ಗಮನ ಹರಿಸಿದೆ. ಸಿಎಂ ಮತ್ತು ಡಿಸಿಎಂ ಕುರಿತ ತೀರ್ಮಾನಕ್ಕೆ ನಾವು ಬದ್ಧ” ಎಂದು , ಎಂ.ಸಿ. ಸುಧಾಕರ್ ಹೇಳಿದರು.
ಇದನ್ನು ಓದಿ : ಶಾರುಖ್ ಖಾನ್ಗೆ 60ರ ಸಂಭ್ರಮ
ಡಿಕೆಶಿ ಮುಖ್ಯಮಂತ್ರಿಯಾಗಲು ಅರ್ಹತೆ
ಮುಖ್ಯಮಂತ್ರಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು “ಅವಕಾಶ ಸಿಕ್ಕರೆ ಯಾರು ಬೇಡ ಅಂತಾರೆ? ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಜೋಡೆತ್ತುಗಳಂತೆ ಕೆಲಸ ಮಾಡಿದ್ದಾರೆ,” ಎಂದು ಹೇಳಿದರು.
ಇದನ್ನು ನೋಡಿ : DK ಅವರಿಗೆ ಸಿಎಂ ಆಗುಅರ್ಹತೆ ಇದೆ: ಸಚಿವ ಎಂ.ಸಿ. ಸುಧಾಕರ್




