Shah Rukh Khan : ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರಿಗೆ ಇಂದು ಜನುಮದಿನದ ಸಂಭ್ರಮ.

Shah Rukh Khan : ಬಾಲಿವುಡ್ ನಟ ಶಾರುಖ್ ಖಾನ್ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರನ್ನು ನೋಡುವ ಆಸೆಯಿಂದ ದೇಶದೆಲ್ಲೆಡೆ ಮತ್ತು ವಿದೇಶದಿಂದಲೂ ಅಭಿಮಾನಿಗಳು ಆಗಮಿಸಿದ್ದಾರೆ. ನಟನ ನಿವಾಸ ಮನ್ನತ್ ಹೊರಗೆ ನೂರಾರು ಅಭಿಮಾನಿಗಳು ತಮ್ಮ ಪ್ರಿಯ ನಟನಿಗೆ ಶುಭಕೋರಲು ಜಮಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ
ಶಾರುಖ್ ಖಾನ್ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಹ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಮೂಡಿದೆ. ಫ್ಯಾನ್ಸ್ ಅವರ ಹೃದಯಸ್ಪರ್ಶಿ ಸಂದೇಶಗಳು ಮತ್ತು ಮೆಮೋರಿ ಪೋಸ್ಟ್ಗಳು ವೈರಲ್ ಆಗಿವೆ.
ಇದನ್ನು ಓದಿ : ಯುವತಿ ಅನುಮಾನಾಸ್ಪದ ಸಾವು – ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮುಂದಿನ ಚಿತ್ರ: ‘ಕಿಂಗ್’ ಕುರಿತು ಕುತೂಹಲ
ಶಾರುಖ್ ಖಾನ್ ಅವರ ಮುಂದಿನ ಬಾಲಿವುಡ್ ಚಿತ್ರ ‘ಕಿಂಗ್’ (King Movie) ಕುರಿತಾಗಿ ಸಿನಿಮಾ ಪ್ರಿಯರಲ್ಲಿ ವಿಶೇಷ ಕುತೂಹಲ ಮೂಡಿದೆ. ಚಿತ್ರದಲ್ಲಿ ಶಾರುಖ್ ಖಾನ್ ಅವರ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ವಿಶೇಷವಾಗಿ, ಶಾರುಖ್-ದೀಪಿಕಾ ಜೋಡಿ ಅವರ ಆರನೇ (6ನೇ) ಚಿತ್ರವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಸಿನಿಮಾದ ನಟರ ಪಟ್ಟಿ
ಇನ್ನು ಕಿಂಗ್ ಚಿತ್ರದಲ್ಲಿ ಬಾಲಿವುಡ್ನ ಖ್ಯಾತ ಕಲಾವಿದರು ಅಭಿಷೇಕ್ ಬಚ್ಚನ್, ಸುಹಾನಾ ಖಾನ್, ಅಭಯ್ ವರ್ಮಾ, ಅರ್ಶದ್ ವಾರ್ಸಿ ಮತ್ತು ಜೈದೀಪ್ ಅಹ್ಲಾವತ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಕಾರಣದಿಂದ ಸಿನಿಮಾ ಕುರಿತ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ.

ಇದನ್ನು ನೋಡಿ : ಶಾರುಖ್ ಖಾನ್ಗೆ 60ರ ಸಂಭ್ರಮ; ಮನ್ನತ್ ಎದುರು ಜನವೋ ಜನ




