Hassan : ದನ ಮೇಯಿಸಲು ತೆರಳಿದ ಸಹೋದರರಿಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

Hassan : ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ವಳಗೇರಹಳ್ಳಿ ಗ್ರಾಮದಲ್ಲಿ ಭೀಕರ ದುರ್ಘಟನೆ ನಡೆದಿದೆ. ದನ ಮೇಯಿಸಲು ತೆರಳಿದ ಇಬ್ಬರು ಸಹೋದರರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರಾದವರ ವಿವರ
ಇನ್ನು ಘಟನೆಯಲ್ಲಿ ಮೃತಪಟ್ಟವರು ವಳಗೇರಹಳ್ಳಿ ಗ್ರಾಮದ ಅರ್ಚಕ ರಾಮಚಂದ್ರ ಮತ್ತು ರತ್ನ ದಂಪತಿಯ ಮಕ್ಕಳಾಗಿದ್ದಾರೆ. ಮೃತರನ್ನು ದರ್ಶನ್ (17 ವರ್ಷ), ಲಕ್ಷ್ಮೀಕಾಂತ (5 ವರ್ಷ) ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಮಹಿಳೆಗೆ ಕಿರುಕುಳ ಆರೋಪ – ವಿಶ್ವವಿದ್ಯಾಲಯದ ನಿರ್ದೇಶಕ ಅರೆಸ್ಟ್
ಪೋಷಕರ ನಾಪತ್ತೆ ದೂರು ಮತ್ತು ಶೋಧ ಕಾರ್ಯ
ಬುಧವಾರ ಬೆಳಗ್ಗೆ ದನ ಮೇಯಿಸಲು ಹೊರಟಿದ್ದ ಸಹೋದರರು ಮನೆಗೆ ವಾಪಾಸಾಗದ ಕಾರಣ, ಪೋಷಕರು ದುದ್ದ್ ಪೊಲೀಸ್ ಠಾಣೆಯಲ್ಲಿ ರಾತ್ರಿ ನಾಪತ್ತೆ ದೂರು ದಾಖಲಿಸಿದ್ದರು. ಗುರುವಾರ ಬೆಳಗ್ಗೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಗ್ರಾಮದಲ್ಲಿ ಶೋಧ ಕಾರ್ಯ ನಡೆಸಿ ಕೆರೆಯಲ್ಲಿ ಸಹೋದರರ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ.
ಮುಂದಿನ ಕ್ರಮ
ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಇನ್ನು ಈ ಬಗ್ಗೆ ದುದ್ದ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಇದನ್ನು ನೋಡಿ : ಕೆರೆಗೆ ಬಿದ್ದು ಸಹೋದರರ ಮೃತ್ಯು




