B C Mylarappa Arrest : ಮಹಿಳೆಗೆ ಕಿರುಕುಳ ನೀಡಿದ್ದ ಆರೋಪದ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಬಿ.ಸಿ ಮೈಲಾರಪ್ಪ ಅವರನ್ನು ಬಸವೇಶ್ವರ ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಹಿಳೆಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿರ್ದೇಶಕ ಹಾಗೂ ಪ್ರೊಫೆಸರ್ ಬಿ.ಸಿ. ಮೈಲಾರಪ್ಪ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಕಿರುಕುಳ ಮತ್ತು ಒತ್ತಡದ ಗಂಭೀರ ಆರೋಪ
ಮೈಲಾರಪ್ಪ ಅವರು ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಡ ಏರುತ್ತಿದ್ದರು ಎಂದು ದೂರುದಲ್ಲಿ ಹೇಳಲಾಗಿದೆ. ಫೋನ್ ಮಾಡಿಯೂ ಸಹಕರಿಸುವಂತೆ ಹೇಳುತ್ತಿದ್ದನಂತೆ. ಅಲ್ಲದೇ ಅವರ ಮನೆಯ ಬಳಿಯು ಹೋಗಿ ಕಿರುಕುಳ ನೀಡಿದ್ದಾರೆ.
ಇದನ್ನು ಓದಿ : OTT ಗೆ ಬಂದ ಕಾಂತಾರ ಚಾಪ್ಟರ್ 1 ಸಿನಿಮಾ

ಫೋನ್ ಕರೆಗಳಿಂದ ಹಿಡಿದು ಮನೆ ಬಾಗಿಲಿನವರೆಗೆ ಕಿರುಕುಳ
ಮೈಲಾರಪ್ಪ ಅವರು ನಿರಂತರವಾಗಿ ಕರೆಮಾಡಿ ಅಸಭ್ಯವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಅವರ ನಿವಾಸದ ಬಳಿಯೂ ತೆರಳಿ ಕಿರುಕುಳ ನೀಡಿದ್ದರು. ಈ ನಡೆಗೆ ಬೇಸತ್ತ ಮಹಿಳೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರಿಂದ ಬಂಧನ
ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಪ್ರೊ. ಬಿ.ಸಿ. ಮೈಲಾರಪ್ಪನನ್ನು ಬಂಧಿಸಿದ್ದಾರೆ. ಇದರ ಮೊದಲು ಸಹ, ಮಹಿಳೆಗೆ ಬೆದರಿಕೆ ಹಾಕಿದ ಆರೋಪದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.
ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಮೈಲಾರಪ್ಪ ಬಂಧನದಿಂದ ಅಕಾಡೆಮಿಕ್ ವಲಯದಲ್ಲಿ ಸಂಚಲನ ಉಂಟಾಗಿದೆ.

ಇದನ್ನು ನೋಡಿ : ಮಹಿಳೆಗೆ ಕಿರುಕುಳ ಆರೋಪ; ಮಾಜಿ ಕುಲಸಚಿವ ಪ್ರೊ. ಮೈಲಾರಪ್ಪ ಬಂಧನ




