Puneeth Rajkumar : ನಗುಮೊಗದ ಅರಸ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 4 ವರ್ಷ.

ಕನ್ನಡದ ನಗುಮೊಗದ ಅರಸ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಅಗಲಿಕೆಗೆ ಇಂದಿಗೆ ನಾಲ್ಕು ವರ್ಷಗಳು ಪೂರ್ತಿಯಾದವು. ಈ ಹಿನ್ನೆಲೆಯಲ್ಲಿ ಇಂದು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ 4ನೇ ಪುಣ್ಯಸ್ಮರಣೆ ಭಾವಪೂರ್ಣವಾಗಿ ನಡೆಯುತ್ತಿದೆ.
ಇನ್ನು ಪುನೀತ್ ರಾಜ್ಕುಮಾರ್ ಅವರ ಸಮಾಧಿಯನ್ನು ಬಣ್ಣಬಣ್ಣದ ಗುಲಾಬಿ ಹೂಗಳಿಂದ ಅಲಂಕರಿಸಲಾಗಿದೆ. ದೊಡ್ಮನೆ ಕುಟುಂಬದವರು ಬೆಳಗ್ಗೆ 9:30ರ ಸುಮಾರಿಗೆ ಪೂಜೆ ನೆರವೇರಿಸಲಿದ್ದು, ಪುನೀತ್ ಅವರ ಇಷ್ಟದ ಖಾದ್ಯಗಳನ್ನಿಟ್ಟು ಪೂಜೆ ಮಾಡುವ ಯೋಜನೆ ಇದೆ.

ಅಪ್ಪು ಅಭಿಮಾನಿಗಳು ಇಡೀ ದಿನ ಕಂಠೀರವ ಸ್ಟುಡಿಯೋ ಬಳಿ ಅನ್ನಸಂತರ್ಪಣೆ, ನೇತ್ರದಾನ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿ ತಮ್ಮ ಪ್ರೀತಿಯ ಅಪ್ಪುಗೆ ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ.
ಇದೇ ವೇಳೆ, ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಅಭಿಮಾನಿಗಳು ತಮ್ಮ ಸ್ಥಳದಲ್ಲೇ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸುತ್ತಿದ್ದು, ಸೇವಾ ಚಟುವಟಿಕೆಗಳ ಮೂಲಕ ಅವರ ಅಜರಾಮರ ನೆನಪನ್ನು ಉಳಿಸಿಕೊಂಡಿದ್ದಾರೆ.
ಇದನ್ನು ಓದಿ : YTPS ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಅವಘಡ – ಯಂತ್ರಗಳು ಅಗ್ನಿಗಾಹುತಿ

ಇನ್ನು ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಗಳ ಮನಗಳಲ್ಲಿ ಅಪ್ಪು ಎಂದೆಂದಿಗೂ ಜೀವಂತವಾಗಿದ್ದಾರೆ.
ಅಪ್ಪು ಕಳೆದ ವರ್ಷ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಕುಟುಂಬ ವರ್ಗಕ್ಕೆ ರಾಜ್ಯ-ಪರರಾಜ್ಯಗಳು, ಪರ ದೇಶಗಳ ಅಭಿಮಾನಿಗಳು, ಕುಟುಂಬವರ್ಗ, ಬಂಧು-ಮಿತ್ರರಿಗೆ ತೀವ್ರ ದುಃಖವನ್ನುಂಟುಮಾಡಿತ್ತು.

ಇದನ್ನು ನೋಡಿ : ನಗುಮೊಗದ ಅರಸ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 4 ವರ್ಷ




