Fire Accident : ರಾಯಚೂರು ಜಿಲ್ಲೆಯ ಯರಮರಸ್ ಬಳಿಯ ವೈಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಯಂತ್ರಗಳು ಸುಟ್ಟು ಭಸ್ಮವಾಗಿದೆ.

Fire Accident : ರಾಯಚೂರು ಜಿಲ್ಲೆಯ ಯರಮರಸ್ ಬಳಿಯ ಯರಮರಸ್ ತಾಪ ವಿದ್ಯುತ್ ಸ್ಥಾವರದಲ್ಲಿ (YTPS) ಭಾರೀ ಬೆಂಕಿ ಅವಘಡ ಸಂಭವಿಸಿದೆ. ಕಲ್ಲಿದ್ದಲು ಸಾಗಣೆ ವೇಳೆ ಬೆಂಕಿ ಕಾಣಿಸಿಕೊಂಡು ಕನ್ವೇಯರ್ ಬೆಲ್ಟ್ ಸಂಪೂರ್ಣವಾಗಿ ಸುಟ್ಟು ಕರಕಾಗಿದೆ. ಇದರ ಪರಿಣಾಮ ಕೋಟ್ಯಂತರ ರೂಪಾಯಿಗಳ ಮೌಲ್ಯದ ಯಂತ್ರೋಪಕರಣಗಳು ಭಸ್ಮವಾಗಿವೆ.
ಇದನ್ನು ಓದಿ : ಕಿತ್ತು ತಿನ್ನುವ ಬಡತನದ ನಡುವೆಯೂ IIT ಪ್ರವೇಶ ಗಿಟ್ಟಿಸಿದ ಯುವಕ
ಇನ್ನು ಬೆಂಕಿ ಕಾಣಿಸಿಕೊಂಡ ಕ್ಷಣದಲ್ಲೇ ಎಚ್ಚೆತ್ತ ಸಿಬ್ಬಂದಿ ತಕ್ಷಣ ಸ್ಥಳ ಖಾಲಿ ಮಾಡಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದಾಗ್ಯೂ, ಆರ್ಥಿಕ ನಷ್ಟ ಅಂದಾಜಿಸಲು ಸಾಧ್ಯವಾಗಿಲ್ಲ.

ಕಾರ್ಮಿಕರು ಈ ದುರಂತಕ್ಕೆ ವೈಟಿಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : YTPS ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಅವಘಡ – ಕೋಟ್ಯಂತರ ಮೌಲ್ಯದ ಯಂತ್ರಗಳು ಅಗ್ನಿಗಾಹುತಿ




