Chitradurga : ಸಾಧನೆ, ಕೀರ್ತಿ, ಶಿಕ್ಷಣ, ಕಲೆ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ. ಪರಿಶ್ರಮ ಒಂದಿದ್ದರೇ ಸಾಕು ಗೆಲವು ನಮ್ಮದೆ ಅನ್ನೋ ಮಾತು ಅಕ್ಷರಶಃ ಸತ್ಯ.

ಸಾಧನೆ, ಕೀರ್ತಿ, ಶಿಕ್ಷಣ, ಕಲೆ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ. ಪರಿಶ್ರಮ ಒಂದಿದ್ದರೇ ಸಾಕು ಗೆಲವು ನಮ್ಮದೆ ಅನ್ನೋ ಮಾತು ಅಕ್ಷರಶಃ ಸತ್ಯ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆ-ತಾಯಿಗಳಿಬ್ಬರೂ ದಿನಗೂಲಿ ನೌಕರರು, ಬಡತನದಲ್ಲಿ ಓದಿ JEE ಸೀಟು ಗಿಟ್ಟಿಸಿಕೊಳ್ಳುವ ಮೂಲಕ ಚಿತ್ರದುರ್ಗದ ಯುವಕ ರವಿಚಂದ್ರ ಸಾಧನೆಯ ಕಿರೀಟವನ್ನು ತೊಟ್ಟಿದ್ದಾನೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮರ್ಲಹಳ್ಳಿ ಗ್ರಾಮದ ರವಿಚಂದ್ರ ಕಠಿಣ ಪರಿಶ್ರಮದಿಂದ ಬಡತದಲ್ಲೂ ಓದಿ ಯಾವುದೇ ಟ್ಯೂಶನ್ ಇಲ್ಲದೇ, JEE ಪರೀಕ್ಷೆ ಪಾಸಾಗಿ, ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜನೀಯರ್ ಪದವಿಗೆ ಪ್ರವೇಶ ಪಡೆದಿದ್ದಾನೆ.

ಈತನ ತಂದೆ-ತಾಯಿ ಮೂಲತಃ ವಿಜಯನಗರ ಜಿಲ್ಲೆ, ಕೂಡ್ಲಗಿ ತಾಲೂಕಿನ ವಲಸೆ ಗ್ರಾಮದವರು. ಉದ್ಯೋಗ ಅರಸಿ ಮರ್ಲಹಳ್ಳಿ ಗ್ರಾಮಕ್ಕೆ ಬಂದವರು. ಅಂಥವರ ಪುತ್ರ ಈಗ ದೇಶದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದು, ಸದ್ಯ ಬಡತನದಲ್ಲಿ ಕಲಿಯುವ ಇತರರಿಗೆ ಮಾದರಿಯಾಗಿದ್ದಾನೆ.
ಇನ್ನು ರವಿಚಂದ್ರ ಅಪ್ಪ ಅಮ್ಮ ಇಬ್ಬರು ಕೂಡ ಇಟ್ಟಿಗೆ ಕಾರ್ಖಾನೆಯಲ್ಲಿ ಇಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಕೂಲಿ ನಾಲಿ ಮಾಡಿ ತಮ್ಮ ಇಬ್ಬರು ಮಕ್ಕಳ ವಿದ್ಯಾಬ್ಯಾಸವವನ್ನು ಕೊಡಿಸುತ್ತಿದ್ದಾರೆ. ಊರು ಬಿಟ್ಟು ಬೇರೆ ಊರಿಗೆ ಬಂದು ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ಕಟ್ಟಿಕೊಟ್ಟಿದ್ದಾರೆ.
ಇದನ್ನು ಓದಿ : ದೆಹಲಿ ಏರ್ಪೋರ್ಟ್ನಲ್ಲಿ ಬಸ್ಗೆ ಬೆಂಕಿ

ಇನ್ನು IIT ಪ್ರವೇಶ ಪಡೆದ ರವಿಚಂದ್ರ ಮಾತನಾಡಿದ್ದು, ಸರ್ ನಾನು ಓದಿತ್ತು. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ. ನನ್ನ ಈ ಸಾಧನೆಗೆ ನಮ್ಮ ಅಪ್ಪ ಅಮ್ಮನೆ ಮೊದಲ ಕಾರಣ. ನಾನು ಮೊರಾರ್ಜಿ ದೇಸಾಯಿ ಸ್ಟೂಡೆಂಟ್ ಅನ್ನೋದಕ್ಕೆ ಹೆಮ್ಮೆ ಪಡುತ್ತೇನೆ ಎಂದರು.
ಒಟ್ಟಿನಲ್ಲಿ ಕಿತ್ತುತಿನ್ನುವ ಬಡತನ, ಅಪ್ಪ ಅಮ್ಮ ಕೂಲಿ ಮಾಡಿ ಸಾಕುತ್ತಿದ್ದಾರೆ ಅನ್ನೋದನ್ನ ಅರ್ಥ ಮಾಡಿಕೊಂಡಿದ್ದ ಯುವಕ ರವಿಚಂದ್ರ ಇಂದು ಈ ಸಾಧನೆ ಮಾಡಿದ್ದಾನೆ. ಪ್ರತಿಯೊಬ್ಬ ಮಕ್ಕಳು ಕೂಡ ತಮ್ಮ ತಂದೆಯ ಕಷ್ಟವನ್ನು ಅರಿತು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಿದರೆ, ಮುಂದೊಂದು ದಿನ ಒಂದೊಳ್ಳೆ ಜೀವನವನ್ನು ಕಟ್ಟಿಕೊಳ್ಳಬಹುದು.

ಇದನ್ನು ನೋಡಿ : ಇಂದು ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು ಪಾವಗಡ ಗಾಂಧಿ ವಿ.ಎನ್.ರೆಡ್ಡಿ ಅಂತ್ಯಸಂಸ್ಕಾರ




