Tunnel Road Controversy : ಪರಸ್ಪರ ಟೀಕೆ–ಟಿಪ್ಪಣಿಗಳ ನಂತರ ಕೊನೆಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ಮುಖಾಮುಖಿಯಾಗಿದ್ದಾರೆ.

Tunnel Road Controversy : ಪರಸ್ಪರ ಟೀಕೆ–ಟಿಪ್ಪಣಿಗಳ ನಂತರ ಕೊನೆಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ಮುಖಾಮುಖಿಯಾಗಿದ್ದಾರೆ.
ಬೆಂಗಳೂರಿನ ಸುರಂಗ ರಸ್ತೆ (ಟನಲ್ ರಸ್ತೆ) ಯೋಜನೆ ಕುರಿತಂತೆ ಇಬ್ಬರ ನಡುವಿನ ವಾಗ್ವಾದದ ಬಳಿಕ, ಇಂದು ಸದಾಶಿವನಗರದ ಡಿಸಿಎಂ ನಿವಾಸದಲ್ಲಿ ಮಹತ್ವದ ಮಾತುಕತೆ ನಡೆದಿದೆ.
ಟನಲ್ ರಸ್ತೆ ಯೋಜನೆಗೆ ತೇಜಸ್ವಿ ಸೂರ್ಯ ವಿರೋಧ
ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಅವರು ಹೆಬ್ಬಾಳದಿಂದ ಸಿಲ್ಕ್ಬೋರ್ಡ್ ವರೆಗೆ ಟನಲ್ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದ್ದು, ಡಿಪಿಆರ್ ಸಿದ್ದಪಡಿಸಲಾಗುತ್ತಿದೆ.
ಆದರೆ, ಈ ಯೋಜನೆಯಡಿಯಲ್ಲಿ ಲಾಲ್ಬಾಗ್ ಬಳಿ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ನೀಡುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಕಠಿಣ ವಿರೋಧ ವ್ಯಕ್ತಪಡಿಸಿದ್ದಾರೆ.
“ಲಾಲ್ಬಾಗ್ನ ಒಂದು ಇಂಚು ಜಾಗವನ್ನೂ ಸುರಂಗ ರಸ್ತೆಗೆ ಕೊಡೋದಿಲ್ಲ. ಲಾಲ್ಬಾಗ್ ಹಾಳಾಗುವಂತ ಯೋಜನೆಗೆ ನಾನು ಸಹಕಾರ ನೀಡುವುದಿಲ್ಲ,” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
MUST READ : Congress Leaders Clash: ಸಿದ್ದರಾಮಯ್ಯ ಅನಿವಾರ್ಯವೇ? ಬೆಂಬಲಿಗರೇ ಭಿನ್ನ ಧ್ವನಿ ಎತ್ತಿದ ಮಹದೇವಪ್ಪ–ರಾಜಣ್ಣ
ಡಿಕೆಶಿ–ತೇಜಸ್ವಿ ವಾಗ್ವಾದದಿಂದ ಮುಖಾಮುಖಿಗೆ
ಟನಲ್ ರಸ್ತೆ ವಿಚಾರದಲ್ಲಿ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ ನಂತರ ಇಬ್ಬರ ನಡುವೆ ಮಾತಿನ ಕದನ ನಡೆದಿತ್ತು.
ಡಿ.ಕೆ. ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಅವರನ್ನು “ಖಾಲಿ ಟ್ರಂಕ್” ಎಂದು ಟೀಕಿಸಿದ್ದರೆ, ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದರು.
ಆದರೆ ಇದೀಗ, ತೇಜಸ್ವಿ ಸೂರ್ಯ ನೇರವಾಗಿ ಡಿಸಿಎಂ ಅವರನ್ನು ಭೇಟಿಯಾಗಿ, ತಮ್ಮ ಪರ್ಯಾಯ ಯೋಜನೆಯನ್ನು ವಿವರಿಸಿದ್ದಾರೆ.
ಪ್ರಸೆಂಟೇಶನ್ ಮೂಲಕ ಪರ್ಯಾಯ ಸಲಹೆ ನೀಡಿದ ತೇಜಸ್ವಿ ಸೂರ್ಯ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಭೇಟಿಯಾಗಿ, ಸಂಸದ ತೇಜಸ್ವಿ ಸೂರ್ಯ ಅವರು ಟನಲ್ ರಸ್ತೆಯ ಬದಲು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗಗಳು ಕುರಿತು ಪ್ರಸೆಂಟೇಶನ್ ನೀಡಿದ್ದಾರೆ.
ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು —ಡಿ.ಕೆ.ಶಿವಕುಮಾರ್ ಅವರ ಜೊತೆ ಸೌಹಾರ್ದಯುತವಾಗಿ ಚರ್ಚೆ ಆಯ್ತು. ನಾನು ಕೊಟ್ಟ ಪ್ರಸೆಂಟೇಶನ್ನ್ನು ಅವರು ಶಾಂತವಾಗಿ ಆಲಿಸಿದರು. ಟ್ರಾಫಿಕ್ ಸಮಸ್ಯೆ ಕಡಿಮೆ ಆಗಬೇಕಾದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲವಾಗಬೇಕು.”
ತೇಜಸ್ವಿ ಸೂರ್ಯ ಅವರ ಟ್ರಾಫಿಕ್ ಪರಿಹಾರ ಯೋಜನೆ
ತೇಜಸ್ವಿ ಸೂರ್ಯ ಅವರ ಪ್ರಕಾರ —
- ಶೇ.70 ಜನರು ಸಾರ್ವಜನಿಕ ಸಾರಿಗೆ ಉಪಯೋಗಿಸುವಂತೆ ಪ್ರೋತ್ಸಾಹಿಸಬೇಕು.
- 300 ಕಿ.ಮೀ ಮೆಟ್ರೋ ಸಂಪರ್ಕ ನಿರ್ಮಾಣ ಅಗತ್ಯ.
- ಪ್ರತಿ 3 ನಿಮಿಷಕ್ಕೊಮ್ಮೆ ಮೆಟ್ರೋ ಸಿಗುವ ವ್ಯವಸ್ಥೆ ಇರಬೇಕು.
- ಜನರು 5 ನಿಮಿಷ ನಡೆಯುವ ಅಂತರದಲ್ಲಿ ಮೆಟ್ರೋ ಸ್ಟೇಷನ್ ಸಿಗಬೇಕು.
- ಜೊತೆಗೆ ಸಬ್ಅರ್ಬನ್ ರೈಲು ಜಾಲವನ್ನು 300 ಕಿ.ಮೀ ವಿಸ್ತರಿಸಬೇಕು.
ಮೆಟ್ರೋ ಮತ್ತು ಸಬ್ಅರ್ಬನ್ ರೈಲು ಯೋಜನೆಗಳು ಪೂರ್ಣಗೊಂಡರೆ ಒಟ್ಟು 600 ಕಿ.ಮೀ ಸಾರ್ವಜನಿಕ ಸಾರಿಗೆ ಸೌಲಭ್ಯ ಸಿಗುತ್ತದೆ. ಇದರ ಮೂಲಕ ಟ್ರಾಫಿಕ್ ದಟ್ಟಣೆ ಸ್ಪಷ್ಟವಾಗಿ ಕಡಿಮೆಯಾಗುತ್ತದೆ,” ಎಂದು ಅವರು ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವಿನ ಈ ಸೌಹಾರ್ದಯುತ ಚರ್ಚೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಹೊಸ ದಾರಿ ತೋರಿಸಬಹುದೆಂಬ ನಿರೀಕ್ಷೆ ಮೂಡಿಸಿದೆ.
ಟನಲ್ ರಸ್ತೆ ಯೋಜನೆ ಮುಂದುವರೆಯುತ್ತದೆಯಾ ಅಥವಾ ಪರ್ಯಾಯ ಮಾರ್ಗಗಳು ಅನುಮೋದನೆ ಪಡೆಯುತ್ತವೆಯಾ ಎಂಬುದನ್ನು ಗಮನಿಸಬೇಕಾಗಿದೆ.
ಇದನ್ನು ನೋಡಿ : ಅಂಬೇಡ್ಕರ್ ಹಾಗೂ ಗಾಂಧಿ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲ ಪೂಜೆ




