Congress Leaders Clash: ಸಿದ್ದರಾಮಯ್ಯ ಕಾಂಗ್ರೆಸ್ಗೆ ಅನಿವಾರ್ಯ ಎಂದು ಕೆ.ಎನ್.ರಾಜಣ್ಣ ಹೇಳಿಕೆ .

ಸಿದ್ದರಾಮಯ್ಯ ಕಾಂಗ್ರೆಸ್ಗೆ ಅನಿವಾರ್ಯ ಎಂದು ಕೆ.ಎನ್.ರಾಜಣ್ಣ ಹೇಳಿಕೆ
Congress Leaders Clash: ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಅವರ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಮುಂದಿನ ನೇತೃತ್ವದ ವಿಷಯ ಮತ್ತೆ ಚರ್ಚೆಯ ಹಾದಿ ಹಿಡಿದಿದೆ.
ರಾಜಣ್ಣ ಹೇಳಿಕೆಯು ಸಿದ್ದರಾಮಯ್ಯ ನೇತೃತ್ವದ ಬಲ ಮತ್ತು ಅವರ ಪ್ರಭಾವವನ್ನು ಉಲ್ಲೇಖಿಸಿತ್ತು. ಆದರೆ ಅದೇ ವಿಚಾರಕ್ಕೆ ಸಿದ್ದರಾಮಯ್ಯರ ಆಪ್ತ ಮತ್ತು ಬೆಂಬಲಿಗರಾದ ಸಚಿವ ಎಚ್.ಸಿ.ಮಹದೇವಪ್ಪ ನೀಡಿದ ಪ್ರತಿಕ್ರಿಯೆ ಅಚ್ಚರಿ ಹುಟ್ಟಿಸಿದೆ.
ಮಹದೇವಪ್ಪ ಸ್ಪಷ್ಟನೆ – “ಯಾರು ಯಾರಿಗೂ ಅನಿವಾರ್ಯ ಅಲ್ಲ”
ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ — ಯಾರು ಯಾರಿಗೂ ಅನಿವಾರ್ಯ ಅಲ್ಲ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು,”ಎಂದು ಹೇಳಿದರು.
ಮಹದೇವಪ್ಪ ಹೇಳಿಕೆಯಿಂದ ಸಿದ್ದರಾಮಯ್ಯ ಬೆಂಬಲಿಗರೇ ಪರಸ್ಪರ ವಿರುದ್ಧ ಹೇಳಿಕೆ ನೀಡಿರುವ ಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಒಳಗಡೆ ಹೊಸ ಕುತೂಹಲ ಸೃಷ್ಟಿಯಾಗಿದೆ.
ಸಿದ್ಧರಾಮಯ್ಯ ಬೆಂಬಲಿಗರ ದ್ವಂದ್ವ ಹೇಳಿಕೆ – ಅಚ್ಚರಿ ರಾಜಕೀಯ ವಲಯದಲ್ಲಿ
ಕೆ.ಎನ್.ರಾಜಣ್ಣ ಮತ್ತು ಎಚ್.ಸಿ.ಮಹದೇವಪ್ಪ ಇಬ್ಬರೂ ಸಿದ್ದರಾಮಯ್ಯರ ಆಪ್ತರು.
ಆದರೂ ಇವರಿಬ್ಬರ ವಿಭಿನ್ನ ಹೇಳಿಕೆಗಳು, ಸಿಎಂ ಸ್ಥಾನ ಬದಲಾವಣೆಯ ಸಾಧ್ಯತೆಗಳ ಕುರಿತು ಊಹಾಪೋಹಗಳಿಗೆ ಕಾರಣವಾಗಿವೆ.
ರಾಜಕೀಯ ವಲಯದಲ್ಲಿ “ಸಿದ್ದರಾಮಯ್ಯರನ್ನು ಕುರ್ಚಿಯಿಂದ ಕೆಳಗಿಳಿಸಲು ನಡೆಯುತ್ತಿರುವ ಮುನ್ಸೂಚನೆಯೇ?” ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಇದನ್ನು ಓದಿ : ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಮಾಹಿತಿ ನೀಡಿದ ಸೂರ್ಯಕುಮಾರ್

ಮಹದೇವಪ್ಪ ಹೇಳಿಕೆ-ಪ್ರಜಾಪ್ರಭುತ್ವದಲ್ಲಿ ಅಂಧಾಭಿಮಾನ ಇರಬಾರದು
ಮಹದೇವಪ್ಪ ಸ್ಪಷ್ಟವಾಗಿ ಹೇಳಿದರು — ಪ್ರಜಾಪ್ರಭುತ್ವದ ಆಧಾರ ಸಂಸ್ಥೆ ಮಾಧ್ಯಮ. ಎಲ್ಲರೂ ಸೇರಿ ಸಂಸ್ಥೆ ಕಟ್ಟೋದು ಮುಖ್ಯ. ‘ಇವರಿಲ್ಲದೆ ಆಗಲ್ಲ’ ಅನ್ನೋದು ಅಂಧಾಭಿಮಾನ. ಹೊಗಳುಭಟ್ಟತನ ಸರ್ವಾಧಿಕಾರ ಸೃಷ್ಟಿ ಮಾಡುತ್ತದೆ,”
ಎಂದು ಹೇಳಿದರು.
ಅವರ ಹೇಳಿಕೆಯಲ್ಲಿ ಪಕ್ಷದ ಒಳಗಿನ ನಾಯಕರ ಅಂಧ ಬೆಂಬಲದ ವಿರುದ್ಧದ ಸೂಚನೆ ಸ್ಪಷ್ಟವಾಗಿತ್ತು.
ಮಹದೇವಪ್ಪ – ಹೈಕಮಾಂಡ್ ತೀರ್ಮಾನವೇ ಅಂತಿಮ
ಸಿಎಂ ಸ್ಥಾನ, ಪವರ್ ಶೇರ್ ಹಾಗೂ ಮುಂದಿನ ನಾಯಕತ್ವದ ಕುರಿತು ಮಾತನಾಡಿದ ಮಹದೇವಪ್ಪ ಹೇಳಿದರು — “ಹೈಕಮಾಂಡ್ ಹೇಳಿದಂತೆ ಆಗುತ್ತದೆ.
ಐದು ವರ್ಷ ನಾನೇ ಇರುತ್ತೇನೆ ಎಂದಿರುವುದರಲ್ಲಿ ತಪ್ಪಿಲ್ಲ. ಉಳಿದವು ಅಂತೆಕಂತೆ ಚರ್ಚೆಗಳು ಮಾತ್ರ. ಹೈಕಮಾಂಡ್ ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿದೆ,”
ಎಂದು ಸ್ಪಷ್ಟನೆ ನೀಡಿದರು.
“ಸಿಎಂ ಮಾಡುವಲ್ಲಿ ದಲಿತ ಅದು, ಇದು ಇಲ್ಲ” – ಮಹದೇವಪ್ಪ
ದಲೀತರಿಗೆ ಸಿಎಂ ಅವಕಾಶ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು —“ಯಾರಾರು ಸಮರ್ಥರು ಇದ್ದಾರೋ ಅವರು ಆಗುತ್ತಾರೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ದಲಿತರನ್ನು ಸಿಎಂ ಆಗಿಸಿದೆ. ರಾಹುಲ್ ಗಾಂಧಿ ಬದ್ದತೆ ಇರುವ ನಾಯಕ, ಖರ್ಗೆ ಅನುಭವಿ ರಾಜಕಾರಣಿ,”
ಎಂದರು.
ಇದನ್ನು ನೋಡಿ : ಅಂಬೇಡ್ಕರ್ ಹಾಗೂ ಗಾಂಧಿ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲ ಪೂಜೆ




