SHIVAMOGGA: ಶಿವಮೊಗ್ಗ ಜಿಲ್ಲೆಯ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಕಾರ್ಮಿಕ ಇಲಾಖೆಯ ಸಮುಚ್ಛಯ ಕಟ್ಟಡದ ಗೋಡೆ ಕುಸಿದು (Building Collapse) ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಆತನ ಸಹೋದರನ ಕೈಕಾಲುಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

SHIVAMOGGA: ನೂತನವಾಗಿ ನಿರ್ಮಿಸಲಾಗಿದ್ದ ಕಾರ್ಮಿಕ ಇಲಾಖೆಯ ಸಮುಚ್ಚಯ ಕಟ್ಟಡದ ಗೋಡೆ ಕುಸಿದು ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ನಡೆದಿದೆ.
ಇನ್ನು ಮೃತನನ್ನು ಮಂಜು (35) ಎಂದು ಗುರುತಿಸಲಾಗಿದೆ. ಅವನ ಸಹೋದರ ಮುತ್ತು ಅವರ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸಮುಚ್ಛಯ ಕಟ್ಟಡದ ತಾತ್ಕಾಲಿಕ ಭಾಗವನ್ನು ಮಂಜು ಮತ್ತು ಮುತ್ತು ಕೆಡವಲು ಮುಂದಾಗಿದ್ದಾಗ, ಕಟ್ಟಡದ ಗೋಡೆ ದಿಢೀರ್ ಕುಸಿದು ಬಿದ್ದಿದೆ. ಪರಿಣಾಮ ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಮಂಜು ಸ್ಥಳದಲ್ಲೇ ಮೃತಪಟ್ಟರೆ, ಮುತ್ತು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ :Tumakuru :YS 11 ಕಾರ್ ಮ್ಯಾಕ್ಸ್ ನಿಂದ ದೀಪಾವಳಿ ಆಫರ್ – ಯೂಸೂಡ್ ಕಾರ್ ತಗೊಂಡ್ರೆ S-24 ultra ಪೋನ್ Free…!
ಇನ್ನು ಕಾರ್ಮಿಕ ಇಲಾಖೆ ಇತ್ತೀಚೆಗೆ ಸಿದ್ಲೀಪುರದಲ್ಲಿ ಈ ಸಮುಚ್ಛಯ ಭವನವನ್ನು ನಿರ್ಮಿಸಿದ್ದು, ಘಟನೆಯ ಕೆಲವು ದಿನಗಳ ಹಿಂದೆ ಅದನ್ನು ಉದ್ಘಾಟಿಸಲಾಗಿತ್ತು. ಆದರೆ ಏಕಾಏಕಿ ಗೋಡೆ ಕುಸಿದು ಬಿದ್ದಿದೆ.
MUST WATCH : GUBBI PROTEST | ಜಿ.ಹೊಸಹಳ್ಳಿ ಬಳಿ ಟೋಲ್ ನಿರ್ಮಾಣ ಬೃಹತ್ ಪ್ರತಿಭಟನೆಗೆ ರೈತರು ಸಜ್ಜು | GUBI TOLL |




