Yathindra Siddaramaiah : ಕಾಂಗ್ರೆಸ್ (Congress) ಒಳಗಡೆ ಮತ್ತೆ ಅಧಿಕಾರದ ಪೈಪೋಟಿ ತೀವ್ರಗೊಂಡಿದೆ. ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ ಇದೀಗ ಡಿಕೆ ಶಿವಕುಮಾರ್ ಬಣದಲ್ಲಿ ಆಕ್ರೋಶ ಉಂಟುಮಾಡಿದೆ.

ಹೈಕಮಾಂಡ್ ಅಂಗಳದಲ್ಲಿ ಉತ್ತರಾಧಿಕಾರಿ ಯುದ್ಧ: ಯತೀಂದ್ರ ಹೇಳಿಕೆ ರಾಜಕೀಯ ಕಿಚ್ಚು ಕೆರಳಿಸಿದೆ
Yathindra Siddaramaiah : ಕಾಂಗ್ರೆಸ್ (Congress) ಒಳಗಡೆ ಮತ್ತೆ ಅಧಿಕಾರದ ಪೈಪೋಟಿ ತೀವ್ರಗೊಂಡಿದೆ. ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ ಇದೀಗ ಡಿಕೆ ಶಿವಕುಮಾರ್ ಬಣದಲ್ಲಿ ಆಕ್ರೋಶ ಉಂಟುಮಾಡಿದೆ. “ನೋಟಿಸ್ ಬಂದಾಗ ನೋಡೋಣ” ಎಂಬ ಯತೀಂದ್ರ ಹೇಳಿಕೆ ಹೈಕಮಾಂಡ್ ಕಿವಿಗೂ ತಲುಪಿದೆ.
ಸತೀಶ್ ಜಾರಕಿಹೊಳಿಗೆ ಬೆಂಬಲ – ಯತೀಂದ್ರ ಹೇಳಿಕೆ ವಿವಾದದ ಕಿಡಿ
ಯತೀಂದ್ರ ಸಿದ್ದರಾಮಯ್ಯ ಅವರು, “ಸಿಎಂ ಸಿದ್ದರಾಮಯ್ಯನವರ ನಂತರ ಸತೀಶ್ ಜಾರಕಿಹೊಳಿಗೆ ರಾಜ್ಯದ ನೇತೃತ್ವ ವಹಿಸುವ ಸಾಮರ್ಥ್ಯವಿದೆ” ಎಂದಿದ್ದು, ಇದರಿಂದ ಉತ್ತರಾಧಿಕಾರಿ ಯುದ್ಧ ಹೊಸ ಹಂತ ತಲುಪಿದೆ. ಹೈಕಮಾಂಡ್ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಅದರ ಬೆನ್ನಲ್ಲೇ, ಡಿಕೆ ಶಿವಕುಮಾರ್ ಬಣದ ನಾಯಕರು “ಯತೀಂದ್ರಗೆ ನೋಟಿಸ್ ಕೊಡಲ್ಲವಾ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಯತೀಂದ್ರ ಸ್ಪಷ್ಟ ಉತ್ತರ ನೀಡುತ್ತಾ, “ನೋಟಿಸ್ ಬಂದಾಗ ನೋಡೋಣ. ನಾನು ಹೇಳಿದಲ್ಲಿ ತಪ್ಪಿಲ್ಲ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ,” ಎಂದಿದ್ದಾರೆ.
ಇದನ್ನು ಓದಿ : ಹಿಂದಿ ನಟ ಸತೀಶ್ ಶಾ ನಿಧನ

ಡಿಕೆ ಶಿವಕುಮಾರ್ ಬಣದ ಅಸಮಾಧಾನ ತಣಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ
ಡಿಕೆ ಶಿವಕುಮಾರ್ ಬಣದ ಆಕ್ರೋಶ ತಣಿಸಲು ಸಿಎಂ ಸಿದ್ದರಾಮಯ್ಯ ತಮ್ಮ ಸೈದ್ಧಾಂತಿಕ ಟಚ್ ನೀಡಿದ್ದಾರೆ. ಯತೀಂದ್ರ ಹೇಳಿಕೆಯನ್ನು ಬೆಂಬಲಿಸುವಂತೆಯೇ ಅವರು ಹೇಳಿದ್ದು ಸೈದ್ಧಾಂತಿಕ ನಿಲುವು ಎಂದಿದ್ದಾರೆ.
ಇದರಿಂದ ಡಿಕೆ ಶಿವಕುಮಾರ್ ಬಣದೊಳಗೆ ತಳಮಳ ಹೆಚ್ಚಾಗಿದೆ. ಸಿಎಂ ಸ್ಥಾನಕ್ಕೆ ಮುಂದಿನ ಅಭ್ಯರ್ಥಿ ಯಾರು ಎಂಬ ಚರ್ಚೆ ಇದೀಗ ಮತ್ತೊಮ್ಮೆ ಕಾವೇರಿದೆ.
ಸಿಎಂ ದೆಹಲಿ ಪ್ರವಾಸ, ಸಂಪುಟ ಪುನಾರಚನೆ ಊಹಾಪೋಹ
ಇತ್ತ, ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ್ 15ರಂದು ನಡೆಯಲಿರುವ ಈ ಭೇಟಿಯು ರಾಜಕೀಯ ಕುತೂಹಲ ಹೆಚ್ಚಿಸಿದೆ. ಸಂಪುಟ ಪುನಾರಚನೆ, ಕುಚ್ಚಿ ಬದಲಾವಣೆ ಕುರಿತ ಚರ್ಚೆ ನಡೆಯಲಿದೆ ಎನ್ನುವ ಊಹಾಪೋಹಗಳು ಸಕ್ರಿಯವಾಗಿವೆ.
ಸಚಿವ ಕೃಷ್ಣಬೈರೇಗೌಡ “ನಾನು ಸಚಿವ ಸ್ಥಾನ ಬಿಡಲು ಸಿದ್ಧ” ಎಂದಿದ್ದು, ಹೈಕಮಾಂಡ್ ನಿರ್ಧಾರದತ್ತ ಎಲ್ಲರ ಕಣ್ಣು ತಿರುಗಿದೆ. ಈ ನಡುವೆ ಶಾಸಕ ಅಪ್ಪಾಜಿ ನಾಡಗೌಡ ಅಸಮಾಧಾನ ಹೊರಹಾಕಿದ್ದು, ಹಿರಿಯ ನಾಯಕರಿಗೆ ಗೌರವ ನೀಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಯತೀಂದ್ರಗೆ ನೋಟಿಸ್ ಕೊಡುವ ಧೈರ್ಯ ಡಿಕೆಶಿಗೆ ಇದೆಯಾ? – ಆರ್. ಅಶೋಕ್ ಟಾಂಗ್
ಇನ್ನು ಬಿಜೆಪಿ ನಾಯಕ ಆರ್. ಅಶೋಕ್ ಕಾಂಗ್ರೆಸ್ ಒಳ ಕಲಹವನ್ನು ಗುರಿಯಾಗಿಸಿಕೊಂಡಿದ್ದಾರೆ. “ಕಲಾವಿದರಿಗೆ ಧಮ್ಕಿ ಹಾಕ್ತೀರಾ, ಶಾಸಕರಿಗೆ ಬಗ್ಗಿ ನಡೀಬೇಕು ಅಂತಾ ಹೇಳ್ತೀರಾ, ಆದರೆ ಯತೀಂದ್ರಗೆ ನೋಟಿಸ್ ಕೊಡುವ ಧೈರ್ಯವಿಲ್ಲವಾ ಡಿಕೆ ಶಿವಕುಮಾರ್?” ಎಂದು ಟ್ವೀಟ್ ಮಾಡಿದ್ದಾರೆ.
ಅವರು ಮುಂದುವರಿಸಿದ್ದು, “ಕಾಂಗ್ರೆಸ್ ಮನೆ ದಿನಕ್ಕೊಂದು ಬೆಳವಣಿಗೆ — ನಮಗೆ ಭೂರಿ ಭೋಜನ” ಎಂದಿದ್ದಾರೆ.

ನವೆಂಬರ್ನಲ್ಲಿ ಕಾಂಗ್ರೆಸ್ನ ಭವಿಷ್ಯ ತೀರ್ಮಾನ?
ಹೀಗಾಗಿ ನವೆಂಬರ್ ಆರಂಭದ ವೇಳೆಗೆ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ, ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವಿನ ಪೈಪೋಟಿ ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತದೆ ಎಂಬುದು ಕುತೂಹಲಕಾರಿ ವಿಷಯವಾಗಿದೆ.
ಉತ್ತರಾಧಿಕಾರಿ ಯುದ್ಧ ಈಗ ಕಾಂಗ್ರೆಸ್ ಕೋಟೆಯ ಸೆಂಟರ್ ಆಫ್ ಆಟ್ರಾಕ್ಷನ್ ಆಗಿದೆ.
ಇದನ್ನು ನೋಡಿ : ಹೋಂ ಸ್ಟೇ ಬಾತ್ ರೂಮ್ನಲ್ಲಿ ಯುವತಿ ಅನುಮಾನಾಸ್ಪದ ಸಾವು




