Basanagouda Patil Yatnal : ಹಲಾಲ್ ಪ್ರಮಾಣಪತ್ರ ಹೊಂದಿರುವ ಸಂಸ್ಥೆಗಳನ್ನ ನಿಷೇಧಿಸುಂತೆ ಶಾಸಕ ಯತ್ನಾಳ್ ಆಗ್ರಹ: ಅಮಿತ್ ಶಾಗೆ ಪತ್ರ

Basanagouda Patil Yatnal : ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ನಿಷೇಧಿಸಬೇಕು — ಯತ್ನಾಳ್ ಪತ್ರ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda R Patil Yatnal) ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದು ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ತಕ್ಷಣ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.
ಅವರು ಈ ಸಂಸ್ಥೆಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಗ್ರಹಿಸಲಾದ ಹಣ ರಾಷ್ಟ್ರವಿರೋಧಿ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶಾದ್ಯಂತ ಹಲಾಲ್ ಉತ್ಪನ್ನ ನಿಷೇಧ ಅಗತ್ಯ
ಯತ್ನಾಳ್ ಅವರು ತಮ್ಮ ಪತ್ರದಲ್ಲಿ, ಉತ್ತರ ಪ್ರದೇಶದಲ್ಲಿ ಈಗಾಗಲೇ ಹಲಾಲ್ ಉತ್ಪನ್ನಗಳ ನಿಷೇಧ ಜಾರಿಯಾಗಿದೆ, ಹೀಗಾಗಿ ಇದೇ ರೀತಿಯಾಗಿ ದೇಶಾದ್ಯಂತ ಹಲಾಲ್ ಉತ್ಪನ್ನಗಳು ಮತ್ತು ಪ್ರಮಾಣೀಕರಣ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದು ತಿಳಿಸಿದ್ದಾರೆ.

ಹಲಾಲ್ ಪ್ರಮಾಣೀಕರಣ ಕಾನೂನುಬಾಹಿರ ಪ್ರಕ್ರಿಯೆ
ಶಾಸಕ ಯತ್ನಾಳ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಹಲವಾರು ಇಸ್ಲಾಮಿಕ್ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ
ಮಾಂಸ ಉತ್ಪಾದನೆ, ಆಹಾರ, ಸೌಂದರ್ಯವರ್ಧಕ ಉತ್ಪನ್ನಗಳು ಸೇರಿದಂತೆ ಹಲವಾರು ವಲಯಗಳಲ್ಲಿ ಹಲಾಲ್ ಪ್ರಮಾಣೀಕರಣ ನೀಡುತ್ತಿವೆ.
ಅವರ ಪ್ರಕಾರ, ಈ ಸಂಸ್ಥೆಗಳು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ.
ಹಲಾಲ್ ಪ್ರಮಾಣೀಕರಣಕ್ಕೆ ಭಾರತದಲ್ಲಿ ಯಾವುದೇ ಕಾನೂನು ಮಾನ್ಯತೆ ಇಲ್ಲ. ಹೀಗಾಗಿ ಈ ಪ್ರಕ್ರಿಯೆಯೇ ಕಾನೂನುಬಾಹಿರವಾಗಿದೆ,”
ಎಂದು ಯತ್ನಾಳ್ ಹೇಳಿದ್ದಾರೆ.
ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಹಣ ಬಳಕೆ
ಯತ್ನಾಳ್ ಅವರು ತಮ್ಮ ಪತ್ರದಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ
— ಈ ಪ್ರಮಾಣೀಕರಣಗಳ ಮೂಲಕ ಸಂಗ್ರಹಿಸಲಾದ ಹಣವನ್ನು ಭಯೋತ್ಪಾದನೆಗೆ ಬೆಂಬಲ, ಜಿಹಾದ್ ಪ್ರಚಾರ, ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದವರ ಕಾನೂನು ನೆರವಿಗಾಗಿ ಬಳಸಲಾಗುತ್ತಿದೆ,”
ಎಂದು ತಿಳಿಸಿದ್ದಾರೆ.
ಅವರು ಹಲಾಲ್ ಇಂಡಿಯಾ, ಜಮಿಯತ್ ಉಲೇಮಾ-ಐ-ಹಿಂದ್ ಹಲಾಲ್ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಶನ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಮಿಯತ್ ಉಲಾಮಾ-ಇ-ಮಹಾರಾಷ್ಟ್ರ ಸೇರಿದಂತೆ ಹಲವು ಸಂಸ್ಥೆಗಳ ಹೆಸರು ಉಲ್ಲೇಖಿಸಿದ್ದಾರೆ.
FSSAI ಹೊರತುಪಡಿಸಿ ಬೇರೆ ಯಾರಿಗೂ ಪ್ರಮಾಣೀಕರಣ ಹಕ್ಕಿಲ್ಲ
ಯತ್ನಾಳ್ ಪ್ರಕಾರ, ಕಾನೂನಿನ ಪ್ರಕಾರ Food Safety and Standards Authority of India (FSSAI) ಹೊರತುಪಡಿಸಿ ಬೇರೆ ಯಾವುದೇ ಪ್ರಾಧಿಕಾರ ಅಥವಾ ಧಾರ್ಮಿಕ ಸಂಸ್ಥೆಗೆ ಉತ್ಪನ್ನಗಳಿಗೆ ಪ್ರಮಾಣಪತ್ರ ನೀಡುವ ಹಕ್ಕಿಲ್ಲ.
ಹೀಗಾಗಿ, ಹಲಾಲ್ ಪ್ರಮಾಣೀಕರಣ ನೀಡುವ ಈ ಸಂಸ್ಥೆಗಳು ಕಾನೂನುಬಾಹಿರ ಕೃತ್ಯ ಮಾಡುತ್ತಿದ್ದವೆ ಎಂದು ಹೇಳಿದ್ದಾರೆ.
ತಕ್ಷಣ ನಿಷೇಧ ಜಾರಿಗೊಳಿಸಿ— ಯತ್ನಾಳ್ ಆಗ್ರಹ
“ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ತಕ್ಷಣದಿಂದ ನಿಷೇಧಿಸಿ, ರಾಷ್ಟ್ರದ ಏಕತೆ ಮತ್ತು ಭದ್ರತೆಯನ್ನು ಕಾಪಾಡುವ ಕ್ರಮ ಕೈಗೊಳ್ಳಬೇಕು,”
ಎಂದು ಶಾಸಕರು ಅಮಿತ್ ಶಾಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.




