KSDL: ಕೆಎಸ್ಡಿಎಲ್ ವತಿಯಿಂದ 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಶುಕ್ರವಾರ ಸರ್ಕಾರಕ್ಕೆ ಹಸ್ತಾಂತರಿಸಿತು.

KSDL ಸಂಸ್ಥೆಯಿಂದ ಸರ್ಕಾರಕ್ಕೆ ₹135 ಕೋಟಿ ಡಿವಿಡೆಂಡ್ ಚೆಕ್
ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಸಂಸ್ಥೆ 2024-25ನೇ ಹಣಕಾಸು ವರ್ಷದಲ್ಲಿ 135 ಕೋಟಿ ರೂ. ಲಾಭಾಂಶವನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿತರಿಸಿದರು.
ಇದನ್ನು ಓದಿ : ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಗೆ ಮತ್ತೆ ಅವಮಾನ
ವಿಧಾನಸೌಧದಲ್ಲಿ ನಡೆದ ಡಿವಿಡೆಂಡ್ ಹಸ್ತಾಂತರ ಕಾರ್ಯಕ್ರಮ
ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ, ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆಯು 1,700 ಕೋಟಿ ರೂ. ವಹಿವಾಟು ನಡೆಸಿದ್ದು, 451 ಕೋಟಿ ರೂ. ಲಾಭ ಕಂಡಿದ್ದು ಅದರ 30% ಭಾಗವನ್ನು ಸರ್ಕಾರಕ್ಕೆ ನೀಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಂಸ್ಥೆಯು ದಾಖಲಿಸಿರುವ ರಾಷ್ಟ್ರಮಟ್ಟದ ದಾಖಲೆವಾಗಿದೆ.
ಹಿಂದಿನ ವರ್ಷಗಳ ಹೋಲಿಕೆ
ಹಿಂದಿನ ವರ್ಷಗಳನ್ನು ಹೋಲಿಸಿದರೆ, 2022-23ರಲ್ಲಿ 54 ಕೋಟಿ ರೂ. ಲಾಭಾಂಶ ನೀಡಲಾಗಿತ್ತು, 2023-24ರಲ್ಲಿ 108 ಕೋಟಿ ರೂ., ಮತ್ತು ಈಗ 135 ಕೋಟಿ ರೂ. ನೀಡಲಾಗಿದೆ. ಲಾಭಾಂಶ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಎಂದು ಸಚಿವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿವಿಧ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಜರಿದ್ದರು.
ಇದನ್ನು ನೋಡಿ : KSDL: ಕೆಎಸ್ಡಿಎಲ್ ಸಂಸ್ಥೆಯಿಂದ ಸರ್ಕಾರಕ್ಕೆ ₹135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ




