Kitchen Recipe : ಮಕ್ಕಳ ಆರೋಗ್ಯವನ್ನು ಕಾಪಾಡಲು ಮತ್ತು ತೂಕವನ್ನು ಸಮತೋಲನದಲ್ಲಿಡಲು ಹೆಲ್ತ್ ಡ್ರಿಂಕ್ ಪೌಡರ್ ಅತ್ಯುತ್ತಮ ಆಯ್ಕೆ. ಮನೆಮಾಡಿ ತಯಾರಿಸಬಹುದಾದ ಈ ಹೆಲ್ತ್ ಡ್ರಿಂಕ್ ಪೌಡರ್ (Health Drink Powder) ರುಚಿಕರವಾಗಿದ್ದು, ಮೂಳೆ ಬಲಪಡಿಸುವ ಹಾಗೂ ಶಕ್ತಿವರ್ಧಕ ಗುಣಗಳನ್ನು ಹೊಂದಿದೆ.

Kitchen Recipe : ಬೇಕಾಗುವ ಪದಾರ್ಥಗಳು (Ingredients for Health Drink Powder)
- ಬಾದಾಮಿ – 1 ಬಟ್ಟಲು
- ಓಟ್ಸ್ – 1 ಬಟ್ಟಲು
- ಕಡಲೆಕಾಯಿ ಬೀಜ – 1 ಬಟ್ಟಲು
- ಮಖಾನಾ – 1 ಬಟ್ಟಲು
- ಕುಂಬಳಕಾಯಿ ಬೀಜ – 1 ಬಟ್ಟಲು
- ಗೋಡಂಬಿ – ಸ್ವಲ್ಪ
- ಕೋಕೋ ಪೌಡರ್ – 3–4 ಚಮಚ
ಮಾಡುವ ವಿಧಾನ (How to Make Health Drink Powder at Home)
- ಬಾಣಲೆಯಲ್ಲಿ ಸ್ವಲ್ಪ ಉರಿ ಇಟ್ಟು, ಮೇಲಿನ ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ ಪ್ರತ್ಯೇಕವಾಗಿ ಕೆಂಪಗೆ ಹುರಿದುಕೊಳ್ಳಿ.
- ಹುರಿದ ನಂತರ ತಣ್ಣಗಾಗಲು ಬಿಡಿ.
- ತಣ್ಣಗಾದ ಪದಾರ್ಥಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿ ಮಾಡಿ.
- ಈ ಪುಡಿಗೆ ಕೋಕೋ ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ತಯಾರಾದ ಪೌಡರ್ ಅನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ.
MUST READ : Kitchen Recipe : Gobi Pepper Dry Recipe ಗೋಬಿ ಪೆಪ್ಪರ್ ಡ್ರೈ
ಹೆಲ್ತ್ ಡ್ರಿಂಕ್ ತಯಾರಿಸುವ ವಿಧಾನ (How to Prepare the Drink)
- ಬಿಸಿ ಹಾಲಿಗೆ ಒಂದು ಚಮಚ ಹೆಲ್ತ್ ಡ್ರಿಂಕ್ ಪೌಡರ್ ಹಾಕಿ.
- ಒಂದು ಚಮಚ ಬೆಲ್ಲದ ಪುಡಿ ಅಥವಾ ಕಲ್ಲು ಸಕ್ಕರೆ ಸೇರಿಸಿ.
- ಚೆನ್ನಾಗಿ ಕಲಸಿ ಬಿಸಿ ಬಿಸಿ ಆಗಿರುವಾಗಲೇ ಮಕ್ಕಳಿಗೆ ಕೊಡಿ.
ಹೆಲ್ತ್ ಡ್ರಿಂಕ್ನ ಪ್ರಯೋಜನಗಳು (Health Benefits)
- ಮಕ್ಕಳ ತೂಕವನ್ನು ಹೆಚ್ಚಿಸಲು ಸಹಕಾರಿ.
- ಮೂಳೆ ಮತ್ತು ದೇಹ ಬಲವಾಗಿರಲು ಸಹಾಯ.
- ದೈನಂದಿನ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕೃತಕ ರಾಸಾಯನಿಕಗಳಿಲ್ಲದೆ ಸ್ವಾಭಾವಿಕ ಪೌಷ್ಟಿಕ ಪಾನೀಯ.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |




