Sairaj Bahutale : ಪಂಜಾಬ್ ಕಿಂಗ್ಸ್ಗೆ ನೂತನ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ನೇಮಕವಾಗಿದ್ದಾರೆ.

ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಮ್ಮ ತರಬೇತಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಭಾರತದ ಮಾಜಿ ಲೆಗ್ ಸ್ಪಿನ್ನರ್ ಸಾಯಿರಾಜ್ ಬಹುತುಲೆ ಅವರನ್ನು ತಂಡದ ಹೊಸ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ.
2023ರಿಂದ 2025ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದ್ದ ಸುನಿಲ್ ಜೋಶಿ ಅವರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ.
ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ತಂಡದಿಂದ ಬಿಡುಗಡೆಗೊಂಡಿದ್ದ ಬಹುತುಲೆ, ಅದೇ ಪಾತ್ರದಲ್ಲಿ ಸೇವೆ ಸಲ್ಲಿಸಿ ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಸುದೀರ್ಘ ಕೋಚಿಂಗ್ ವೃತ್ತಿಜೀವನದಿಂದ ಅಪಾರ ಅನುಭವವನ್ನು ಗಳಿಸಿದ್ದಾರೆ. 51 ವರ್ಷದ ಈ ಮಾಜಿ ಕ್ರಿಕೆಟಿಗರು ಬಂಗಾಳ, ಕೇರಳ, ವಿದರ್ಭ ಮತ್ತು ಗುಜರಾತ್ ತಂಡಗಳೊಂದಿಗೆ ಕೆಲಸ ಮಾಡಿ, ಯುವ ಭಾರತೀಯ ಬೌಲರ್ಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಇದನ್ನು ನೋಡಿ : ಪಂಜಾಬ್ ಕಿಂಗ್ಸ್ಗೆ ನೂತನ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ನೇಮಕ

ಪಂಜಾಬ್ ಕಿಂಗ್ಸ್ ಸಿಇಒ ಸತೀಶ್ ಮೆನನ್
“ಸುನೀಲ್ ಜೋಶಿ ಅವರ ಸಮರ್ಪಿತ ಸೇವೆಗಾಗಿ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಇದೇ ವೇಳೆ ಸಾಯಿರಾಜ್ ಬಹುತುಲೆ ಅವರನ್ನು ನಮ್ಮ ತರಬೇತಿ ಸಿಬ್ಬಂದಿಗೆ ಸ್ವಾಗತಿಸಲು ನಾವು ಅತ್ಯಂತ ಸಂತೋಷಗೊಂಡಿದ್ದೇವೆ.
ಆಟದ ಬಗ್ಗೆ ಅವರ ಆಳವಾದ ತಿಳುವಳಿಕೆ ಮತ್ತು ದೇಶೀಯ ಬೌಲರ್ಗಳನ್ನು ಸಜ್ಜುಗೊಳಿಸುವ ಅನುಭವವು ನಮ್ಮ ತಂಡಕ್ಕೆ ಅಮೂಲ್ಯವಾಗಲಿದೆ” ಎಂದು ಸತೀಶ್ ಮೆನನ್ ಹೇಳಿದರು.
ಹೊಸ ಹುದ್ದೆ ಕುರಿತು ಉತ್ಸಾಹ ವ್ಯಕ್ತಪಡಿಸಿದ ಬಹುತುಲೆ
“ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಲು ನಾನು ನಿಜವಾಗಿಯೂ ಆನಂದಿತರಾಗಿದ್ದೇನೆ. ಈ ತಂಡ ವಿಭಿನ್ನ ಶೈಲಿಯ ಕ್ರಿಕೆಟ್ ಆಡುತ್ತದೆ ಮತ್ತು ಅಪಾರ ಸಾಮರ್ಥ್ಯ ಹೊಂದಿದೆ.
ಪ್ರತಿಭಾನ್ವಿತ ಆಟಗಾರರ ಜೊತೆ ಕೆಲಸ ಮಾಡಿ, ಅವರ ಕೌಶಲ್ಯವನ್ನು ಮತ್ತಷ್ಟು ಬೆಳೆಸುವತ್ತ ನಾನು ಎದುರು ನೋಡುತ್ತಿದ್ದೇನೆ” ಎಂದು ಹೊಸ ಹುದ್ದೆ ಕುರಿತು ಉತ್ಸಾಹ ಬಹುತುಲೆ ವ್ಯಕ್ತಪಡಿಸಿದರು.

ರಿಕಿ ಪಾಂಟಿಂಗ್ ಅವರ ನೇತೃತ್ವದ ಕೋಚಿಂಗ್ ತಂಡದಲ್ಲಿ ಈಗ ಬಹುತುಲೆ ಸೇರಿಕೊಂಡಿದ್ದಾರೆ. ಬ್ರಾಡ್ ಹ್ಯಾಡಿನ್ ಮತ್ತು ಜೇಮ್ಸ್ ಹೋಪ್ಸ್ ಇತರ ಸಹಾಯಕ ತರಬೇತುದಾರರಾಗಿದ್ದು, 2025ರ ಋತುವಿನಲ್ಲಿ ತಂಡವನ್ನು ಫೈನಲ್ಗೂ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ಪಂಜಾಬ್ ಕಿಂಗ್ಸ್ ತಂಡವು 2026ರ ಐಪಿಎಲ್ ಋತುವಿನಲ್ಲಿ ಹೊಸ ಉತ್ಸಾಹ ಮತ್ತು ತಂತ್ರದೊಂದಿಗೆ ಮೈದಾನಕ್ಕಿಳಿಯಲಿದೆ.

ಇದನ್ನು ಓದಿ : ಹಾಸನಾಂಬ ಉತ್ಸವದಲ್ಲಿ ಕೆಂಡ ಹಾಯ್ದು ಗಮನ ಸೆಳೆದ DC




