Kitchen Recipe : ಈ ಸುಲಭ ಹಾಗೂ ರುಚಿಕರ ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗೆ ಮನೆಲ್ಲೇ ರೆಸ್ಟೋರೆಂಟ್ ಶೈಲಿಯಲ್ಲಿ ತಯಾರಿಸಲು ಸಹಾಯ ಮಾಡುತ್ತದೆ. ಎಲ್ಲಾ ಪದಾರ್ಥಗಳು ಮತ್ತು ಸ್ಟೆಪ್ ಬೈ ಸ್ಟೆಪ್ ವಿಧಾನ ಇಲ್ಲಿದೆ.

Kitchen Recipe : ರುಚಿಕರ ಗೋಬಿ ಪೆಪ್ಪರ್ ಡ್ರೈ ರೆಸಿಪಿ – ಮನೆಲ್ಲೇ ರೆಸ್ಟೋರೆಂಟ್ ಶೈಲಿ
Ingredients / ಬೇಕಾಗುವ ಪದಾರ್ಥಗಳು
- ಹುಕುಸು – 1 ದೊಡ್ಡ ಗಾತ್ರ
- ಉಪ್ಪು – ರುಚಿಗೆ ತಕ್ಕಷ್ಟು
- ಮೈದಾ – 1 ಬಟ್ಟಲು
- ಜೋಳದ ಹಿಟ್ಟು – ಮುಕ್ಕಾಲು ಬಟ್ಟಲು
- ಅರಶಿಣ ಪುಡಿ – ಅರ್ಧ ಚಮಚ
- ಪೆಪ್ಪರ್ ಪುಡಿ – 1 ಚಮಚ
- ಎಣ್ಣೆ – 2 ಚಮಚ
- ಜೀರಿಗೆ – ಅರ್ಧ ಚಮಚ
- ಸೋಂಪು – ಅರ್ಧ ಚಮಚ
- ಕರಿಬೇವು – ಸ್ವಲ್ಪ
- ಹೆಚ್ಚಿದ ಈರುಳ್ಳಿ – 1
- ಬೆಳ್ಳುಳ್ಳಿ – 5
- ಶುಂಠಿ – ಸ್ವಲ್ಪ
- ಕ್ಯಾಪ್ಸಿಕಂ – ಅರ್ಧ
- ಜೀರಾ ಪುಡಿ – ಅರ್ಧ ಚಮಚ
- ಟೊಮೆಟೊ ಸಾಸ್ – 2 ಚಮಚ
- ಕೊತ್ತಂಬರಿ ಸೊಪ್ಪು – 2 ಚಮಚ
READ THIS : Gold Rate Today October 9, 2025:ಚಿನ್ನ, ಬೆಳ್ಳಿ ಬೆಲೆ ಏರಿಕೆಯಲ್ಲಿ ಪೈಪೋಟಿ
Kitchen Recipe : ಮಾಡುವ ವಿಧಾನ
ಹೂಕೋಸು ನೆನೆಸುವುದು
ಹೂಕೋಸು ಬಿಸಿನೀರಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ನಂತರ ನೀರಿನಿಂದ ತೊಳೆಯಿರಿ ಮತ್ತು ಪಕ್ಕಕ್ಕೆ ಇಡಿ.
ಹಿಟ್ಟು ಮಿಶ್ರಣ ತಯಾರಿಕೆ
1 ಬಟ್ಟಲು ಮೈದಾ, 3/4 ಬಟ್ಟಲು ಜೋಳದ ಹಿಟ್ಟು, ಅರಶಿಣ, ಪೆಪ್ಪರ್ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ 1 ಬಟ್ಟಲು ನೀರಿನಿಂದ ಚೆನ್ನಾಗಿ ಮಿಶ್ರಣ ಮಾಡಿ. ಹೂಕೋಸು ಇದರಲ್ಲಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಹೂಕೋಸು ಫ್ರೈ ಮಾಡುವುದು
ಬಾಣಲೆಯಲ್ಲಿ ಎಣ್ಣೆ ಬಿಸಿಗಿಟ್ಟು, ಮಿಶ್ರಣದ ಹೂಕೋಸನ್ನು ಹಾಕಿ ಕ್ರಿಸ್ಪಿ ಆಗಿ ಫ್ರೈ ಮಾಡಿ.
ಮೆಣಸು ಮತ್ತು ಟೊಮೆಟೊ ಮಿಶ್ರಣ
ಬೇರೆ ಪ್ಯಾನ್ನಲ್ಲಿ 2 ಚಮಚ ಎಣ್ಣೆ, ಜೀರಿಗೆ, ಸೋಂಪು, ಕರಿಬೇವು ಹಾಕಿ, ಬಳಿಕ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಕ್ಯಾಪ್ಸಿಕಂ ಫ್ರೈ ಮಾಡಿ.
ಅರಶಿಣ ಪುಡಿ, ಜೀರಾ ಪುಡಿ, ಕೊತ್ತಂಬರಿ ಪುಡಿ, ಪೆಪ್ಪರ್ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊ ಸಾಸ್ ಹಾಕಿ ಮತ್ತೆ ಹುರಿದ ಗೋಬಿಯನ್ನು ಸೇರಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ.
Tips for Best Taste
- ಹೂಕೋಸನ್ನು ಚೆನ್ನಾಗಿ ನೆನೆಸುವುದರಿಂದ ಹುರಿದ ಮೇಲೆ ಕ್ರಿಸ್ಪಿ ಆಗುತ್ತದೆ.
- ಟೊಮೆಟೊ ಸಾಸ್ ಮಿಶ್ರಣದಲ್ಲಿ ಸ್ವಲ್ಪ ನೀರು ಸೇರಿಸಬಹುದು ರುಚಿಗೆ ತಕ್ಕಂತೆ.
- ಕೊತ್ತಂಬರಿ ಸೊಪ್ಪು ಸವಿಯನ್ನು ಹೆಚ್ಚಿಸುತ್ತದೆ.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |




