Kitchen Recipe : ದೀಪಾವಳಿ (Deepavali 2025) ಅಂದರೆ ಬೆಳಕಿನ ಹಬ್ಬ, ಸಂಭ್ರಮದ ಹಬ್ಬ, ಮತ್ತು ಖುಷಿಯ ಹಬ್ಬ. ಮನೆ ಕ್ಲೀನಿಂಗ್ನಿಂದ ಹಿಡಿದು ದೇವರ ಅಲಂಕಾರವರೆಗೆ ಎಲ್ಲೆಡೆ ಸಜ್ಜು ಸಿದ್ಧತೆ ನಡೆಯುತ್ತದೆ. ಆದರೆ ಹಬ್ಬದ ಖುಷಿ ಸ್ವೀಟ್ ರೆಸಿಪಿ (Sweet Recipe) ಇಲ್ಲದೆ ಪೂರ್ಣವಾಗುವುದೇ ಇಲ್ಲ!

Kitchen Recipe : ನಾವಿಂದು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ, ರುಚಿಯಲ್ಲೂ ಮಿಡಿಯುವ ಬಾದಾಮಿ ಬರ್ಫಿ (Badami Barfi) ಮಾಡುವ ವಿಧಾನವನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಸಿಹಿತಿಂಡಿ ಮಕ್ಕಳಿಗೂ, ದೊಡ್ಡವರಿಗೂ ತುಂಬ ಇಷ್ಟವಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು (Ingredients)
- ಬಾದಾಮಿ – 200 ಗ್ರಾಂ
- ಗೋಡಂಬಿ – 100 ಗ್ರಾಂ
- ಸಿಹಿ ಸೇರಿಸದ ಖೋವಾ – 100 ಗ್ರಾಂ
- ಸಕ್ಕರೆ – 1 ಕಪ್
- ತುಪ್ಪ – 2 ಟೇಬಲ್ ಸ್ಪೂನ್
MUST READ : Kitchen Recipe : Gobi Pepper Dry Recipe ಗೋಬಿ ಪೆಪ್ಪರ್ ಡ್ರೈ
ಬಾದಾಮಿ ಬರ್ಫಿ ಮಾಡುವ ವಿಧಾನ (Badami Barfi Recipe)
ಹಂತ 1: ಬಾದಾಮಿ ತಯಾರಿ
ಮೊದಲು ಬಾದಾಮಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದರ ಸಿಪ್ಪೆ ತೆಗೆದು ಮೃದುವಾಗಿಸಿಕೊಳ್ಳಿ.
ಹಂತ 2: ಪೇಸ್ಟ್ ತಯಾರಿಸೋದು
ನೆನೆಸಿದ ಬಾದಾಮಿ ಹಾಗೂ ಗೋಡಂಬಿಯನ್ನು ಹಾಲಿನಲ್ಲಿ ನೆನೆಸಿ ನಂತರ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಹಂತ 3: ಮಿಶ್ರಣ ಕುದಿಸೋದು
ಪ್ಯಾನ್ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿದ ನಂತರ ರುಬ್ಬಿದ ಮಿಶ್ರಣವನ್ನು ಅದಕ್ಕೆ ಹಾಕಿ. ನಂತರ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ನಿರಂತರವಾಗಿ ಕೈಯಾಡಿಸುತ್ತಾ ಕುದಿಸಬೇಕು.
ಹಂತ 4: ಖೋವಾ ಸೇರಿಸೋದು
ಈಗ ಮಿಶ್ರಣಕ್ಕೆ ಖೋವಾ ಹಾಗೂ ತುಪ್ಪ ಸೇರಿಸಿ. ಮಿಶ್ರಣವು ಗಟ್ಟಿಯಾಗುವವರೆಗೆ ಹುರಿಯಿರಿ. ಬರ್ಫಿ ಮಿಶ್ರಣ ಪ್ಯಾನ್ನಿಂದ ಬಿಟ್ಟರೆ ಅದು ಸಿದ್ಧವಾಗಿದೆ ಎಂದರ್ಥ.
ಹಂತ 5: ಸೆಟ್ ಮಾಡುವುದು
ಒಂದು ತಟ್ಟೆಗೆ ತುಪ್ಪ ಸವರಿ, ಸಿದ್ಧ ಮಿಶ್ರಣವನ್ನು ಅದರಲ್ಲಿ ಹಾಕಿ ಸಮತಟ್ಟಾಗಿಸಿ. ಬೆಳ್ಳಿ ವರ್ಕ್ ಅಂಟಿಸಿ ತಣ್ಣಗಾಗಲು ಬಿಡಿ. ನಂತರ ಚಾಕುವಿನಿಂದ ಬರ್ಫಿಯನ್ನು ಇಷ್ಟದ ಆಕಾರದಲ್ಲಿ ಕತ್ತರಿಸಿ ಬಡಿಸಿ.
ಹಬ್ಬದ ಖುಷಿಗೆ ಬಾದಾಮಿ ಬರ್ಫಿಯ ಸಿಹಿ ಟಚ್
ದೀಪಾವಳಿಯ ಹಬ್ಬದಲ್ಲಿ ಬಾದಾಮಿ ಬರ್ಫಿಯಂತಹ ಸಿಹಿತಿಂಡಿ ತಯಾರಿಸಿದರೆ ಮನೆಯ ವಾತಾವರಣವೇ ಸಿಹಿಯಾಗಿ ತುಂಬುತ್ತದೆ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ Diwali Sweet Recipe ನಿಜಕ್ಕೂ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸುತ್ತದೆ.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |




