Bollywood : ಬಾಲಿವುಡ್ ಕ್ಯೂಟ್ ಪೇರ್ ನಲ್ಲಿ ಒಂದಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮೆಲ್ಹೋತ್ರಾ ಅವರು ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಬಾಲಿವುಡ್ನ ಜನಪ್ರಿಯ ಜೋಡಿಯಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮೆಲ್ಹೋತ್ರಾ ಅವರು ಮಗು ಜನಿಸಿದ ನಂತರದ ತಮ್ಮ ಮೊದಲ ದೀಪಾವಳಿಯನ್ನು ಸಂಭ್ರಮದಿಂದ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಕ್ಟೋಬರ್ 20ರಂದು ಈ ದಂಪತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೀಪಾವಳಿ ಹಬ್ಬದ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. “ದೀಪಾವಳಿಯ ಶುಭಾಶಯಗಳು” ಎಂಬ ಕಾಪ್ಷನ್ ಜೊತೆಗೆ ಹಾರ್ಟ್ ಎಮೋಜಿಗಳನ್ನು ಕೂಡ ಶೇರ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ಕಿಯಾರಾ ಅವರು ಹಳದಿ ಬಣ್ಣದ ಅನಾರ್ಕಲಿ ಉಡುಗೆ ಧರಿಸಿದ್ದು, ಸಿದ್ಧಾರ್ಥ್ ಅವರು ಹಳದಿ ಬಣ್ಣದ ಶೆರ್ವಾನಿಯಲ್ಲಿ ತೊಟ್ಟಿದ್ದಾರೆ. ಮೇಕಪ್, ಕ್ಲಾಸಿಕ್ ಇಯರಿಂಗ್, ಬಿಂದಿ, ಮತ್ತು ಹೇರ್ಸ್ಟೈಲ್ ಈ ಎಲ್ಲಾ ಸೇರಿ ಕಿಯಾರಾ ಅವರ ಲುಕ್ ಅಭಿಮಾನಿಗಳ ಮನ ಸೆಳೆಯುತ್ತಿದೆ. ಸಿದ್ಧಾರ್ಥ್ ಅವರ ಶೈಲಿಯೂ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ.
ಇನ್ನು ಈ ವೀಡಿಯೋ ಬ್ಯಾಕ್ಗ್ರೌಂಡ್ನಲ್ಲಿ “ಹ್ಯಾಪಿ ದೀಪಾವಳಿ” ಹಾಡನ್ನು ಸೇರಿಸಲಾಗಿದ್ದು, ವಿಡಿಯೋಗೆ ಹಬ್ಬದ ಉತ್ಸಾಹವನ್ನು ಹೆಚ್ಚಿಸಿದೆ. ಈ ಜೋಡಿಯ ವಿಡಿಯೋ ಇನ್ನು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಇವರ ಜೋಡಿಗೆ ಮೆಚ್ಚುಗೆ ಸಲ್ಲಿಸುತ್ತಾ ಹಾರ್ಟ್ಸ್ ಮತ್ತು ಕಮೆಂಟ್ಸ್ನಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : ಯಶ್-ರಾಧಿಕಾ ದಂಪತಿ ಮಕ್ಕಳ ಕ್ಯೂಟ್ ದೀಪಾವಳಿ ವಿಶ್

ಬಾಲಿವುಡ್ನ ಇತರೆ ಸೆಲೆಬ್ರಿಟಿಗಳಂತೆ, ಕಿಯಾರಾ ಮತ್ತು ಸಿದ್ಧಾರ್ಥ್ ದಂಪತಿಯ ಈ ಸಂಭ್ರಮದ ವಿಡಿಯೋವೂ ದೀಪಾವಳಿ ಹಬ್ಬದ ಭಾವುಕ ಕ್ಷಣಗಳನ್ನು ಮೆಲುಕು ಹಾಕುತ್ತಿದೆ. ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿಯಾರಾ ಅವರು ಮಗುವಾದ ಬಳಿಕವು ಎಷ್ಟು ಸ್ಲಿಂ ಆಗಿ ಕಾಣುತ್ತಿದ್ದಾರೆ… ಯಂಗ್ ಮಮ್ಮಿ ಕಿಯಾರಾ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿದ್ದಾರೆ.

ಇದನ್ನು ನೋಡಿ : ಪೋಷಕರಾದ ಮೇಲೆ ಮೊದಲ ದೀಪಾವಳಿ; ಹೇಗಿತ್ತು ಸಿದ್ದ್- ಕಿಯಾರಾ ಸೆಲೆಬ್ರೇಷನ್




