Bengaluru : ಬೆಂಗಳೂರಿನ ಜಿ.ಟಿ. ಮಾಲ್ ನಲ್ಲಿ 3ನೇ ಮಹಡಿಯಿಂದ ಕೆಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಜಿ.ಟಿ. ಮಾಲ್ನಲ್ಲಿ ಇಂದು ಬೆಳಿಗ್ಗೆ 9.30ರ ಸುಮಾರಿಗೆ ವಿಷಾದನೀಯ ಘಟನೆ ನಡೆದಿದೆ. ಮಾಲ್ನ ಮೂರನೇ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆ? ತನಿಖೆ ಮುಂದುವರಿದಿದೆ
ಈ ಘಟನೆ ಆತ್ಮಹತ್ಯೆಯೋ ಅಥವಾ ಆಯ ತಪ್ಪಿ ಬಿದ್ದಿದೆಯೋ ಎಂಬ ವಿಷಯ ಇನ್ನೂ ದೃಢಪಟ್ಟಿಲ್ಲ. ಆದರೆ ಕೆಲ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನಾ ಸ್ಥಳಕ್ಕೆ ತಕ್ಷಣವೇ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಶವ ರವಾನೆ
ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖ ಮತ್ತು ತಲೆಗೆ ಬಿದ್ದ ಏಟುಗಳಿಂದ ಭಾರಿ ರಕ್ತ ಹರಿದಿದ್ದು, ಸಾವಿಗೆ ಕಾರಣವಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಅವರ ಜೇಬಿನಲ್ಲಿ ₹300 ನಗದು ಪತ್ತೆಯಾಗಿದೆ.
ಇದನ್ನು ನೋಡಿ : ಬೆಂಗಳೂರಿನ ಜಿ.ಟಿ. ಮಾಲ್ ನಲ್ಲಿ 3ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾ*ವು

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
ಸತ್ತ ವ್ಯಕ್ತಿಯ ಪತ್ತೆ ಹಾಗೂ ಘಟನೆಯ ನಿಖರ ಕಾರಣ ಪತ್ತೆ ಹಚ್ಚಲು, ಪೊಲೀಸರು ಜಿ.ಟಿ. ಮಾಲ್ ಒಳಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ದೃಶ್ಯಗಳಿಂದ ವ್ಯಕ್ತಿಯ ಓಡಾಟ, ನಡವಳಿಕೆ ಹಾಗೂ ಬಿದ್ದು ಸಾವನ್ನಪ್ಪಿದ ರೀತಿ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಲಿಸ್ ತನಿಖೆ ಆರಂಭ
ಈ ದುರ್ಘಟನೆಯಿಂದ ಸ್ಥಳೀಯರು, ವ್ಯಾಪಾರಸ್ಥರು ಮತ್ತು ಮಾಲ್ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ನಿರೀಕ್ಷೆಯಲ್ಲಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಈ ಸಾವಿನ ಹಿಂದಿನ ಸತ್ಯ ನಿರ್ಧಾರವಾಗಬೇಕಿದೆ

ಇದನ್ನು ಓದಿ : 765 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ ಚಾಪ್ಟರ್ 1..!




