Rishab Shetty : ನಟ ರಿಷಬ್ ಶೆಟ್ಟಿ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಯಾವುದೇ ಸಿನಿಮಾರಂಗದ ಹಿನ್ನೆಲೆ ಇಲ್ಲದೇ ಬಂದು, ತಮ್ಮ ಪ್ರತಿಭೆಯಿಂದ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವುದು ಪ್ರಾಮುಖ್ಯತೆ ಹೊಂದಿದೆ. ‘ಕಾಂತಾರ’ ಚಿತ್ರದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳನ್ನು ಗಳಿಸಿರುವ ಅವರು, ಇದೀಗ ‘ಜೀ ಕನ್ನಡ’ ವಾಹಿನಿಯಿಂದ ವಿಶೇಷವಾಗಿ ಗೌರವಿಸಲ್ಪಟ್ಟಿದ್ದಾರೆ.
‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ 101ನೇ ಸಾಧಕರಾಗಿ ರಿಷಬ್ ಶೆಟ್ಟಿ
‘ವೀಕೆಂಡ್ ವಿತ್ ರಮೇಶ್’ ನಲ್ಲಿ ರಿಷಬ್ ಶೆಟ್ಟಿ 101ನೇ ಸಾಧಕರಾಗಿ ಭಾಗವಹಿಸಿದ್ದಾರೆ. ಈ ವಿಶೇಷ ಸಂಚಿಕೆಯಲ್ಲಿ ಅವರ ಬದುಕಿನ ಪಯಣವನ್ನು ವೀಕ್ಷಕರಿಗೆ ಪರಿಚಯಿಸಲಾಯಿತು. ಬಾಲ್ಯದ ದಿನಗಳಿಂದ ಚಿತ್ರರಂಗದ ಯಶಸ್ಸನ್ನು ರಿಷಬ್ ಶೆಟ್ಟಿ ಅವರು ಶೇರ್ ಮಾಡಿಕೊಂಡರು.ಅದನ್ನು ನೋಡಿ ಅಭಿಮಾನಿಗಳಿಗೆ ಸ್ಪೂರ್ತಿ ಬಂದಿದೆ.
ಬಿಸಿನೆಸ್ಗಳಿಂದ ಸಿನಿಮಾರಂಗದವರೆಗೆ – ಸ್ಪೂರ್ತಿದಾಯಕ ಪಯಣ
ರಿಷಬ್ ಶೆಟ್ಟಿ ಅವರು ಚಹಾ ಪುಡಿ ಮಾರಾಟ, ವಾಟರ್ ಕ್ಯಾನ್ ಡೆಲಿವರಿ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿ ಬದುಕನ್ನು ಕಟ್ಟಿಕೊಂಡಿರುವುದು ಶೋನಲ್ಲಿ ಬಹಿರಂಗವಾಯಿತು. ಈ ಪಯಣವು ನೂರಾರು ಯುವಕರಿಗೆ ಸ್ಪೂರ್ತಿ ನೀಡುತ್ತಿದೆ.
ಇದನ್ನು ಓದಿ : ಹುಸಿ ಬಾಂಬ್ ಕರೆ – ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್!

‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬೆನ್ನಲ್ಲೇ ಸನ್ಮಾನ
ಈವರೆಗೂ ‘ವೀಕೆಂಡ್ ವಿತ್ ರಮೇಶ್’ ಸೀಟ್ನಲ್ಲಿ ನೂರು ಸಾಧಕರು ಕೂತಿದ್ದಾರೆ. 101ನೇ ಸಾಧಕರಾಗಿ ರಿಷಬ್ ಶೆಟ್ಟಿ ಅವರು ಹಾಟ್ ಸೀಟ್ ಏರಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರಿಗೆ ಈ ಗೌರವ ಸಿಕ್ಕಿರುವುದು ವಿಶೇಷ. ಸಿನಿಮಾದ ಗೆಲುವಿಗಾಗಿ ರಮೇಶ್ ಅವರು ರಿಷಬ್ ಶೆಟ್ಟಿಗೆ ಅಭಿನಂದನೆ ತಿಳಿಸಿದ್ದಾರೆ.ರಿಷಬ್ ಶೆಟ್ಟಿ ಅವರು ಸಾಗಿ ಬಂದ ಹಾದಿ ಸುಲಭದ್ದಾಗಿರಲಿಲ್ಲ. ಅವರು ಕೂಡ ಸಾಕಷ್ಟು ಏಳು-ಬೀಳುಗಳನ್ನು ಕಂಡು ಈ ಹಂತಕ್ಕೆ ಬಂದಿದ್ದಾರೆ.
ರಿಷಬ್ ಶೆಟ್ಟಿ ಅವರನ್ನು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಕರೆತರಲು ಈ ಮೊದಲು ಕೂಡ ಪ್ರಯತ್ನ ನಡೆದಿತ್ತು. ಆದರೆ ಅವರು ಒಪ್ಪಿಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಅವರು ಬರಲು ಸಾಧ್ಯವಾಗಿರಲಿಲ್ಲ.

ಇದನ್ನು ನೋಡಿ : ವೀಕೆಂಡ್ ವಿತ್ ಸಾಧಕರ ಸೀಟ್ನಲ್ಲಿ ನಟ ರಿಷಬ್ ಶೆಟ್ಟಿ




