Bomb Threat : ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್ ಕರೆಗಳು ಹೆಚ್ಚಾಗುತ್ತಿರುವ ನಡುವೆ, ಮತ್ತೊಂದು ಗಂಭೀರವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್ ಕರೆಗಳು ಹೆಚ್ಚಾಗುತ್ತಿರುವ ನಡುವೆ, ಮತ್ತೊಂದು ಗಂಭೀರವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ 6E4814 ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಬರಹವನ್ನು ವ್ಯಕ್ತಿಯೊಬ್ಬನು ಬಾತ್ರೂಂನಲ್ಲಿ ಬರೆದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಬಾತ್ರೂಮ್ನಲ್ಲಿ ಬಾಂಬ್ ಬೆದರಿಕೆ ಬರಹ
ದುಬೈನಿಂದ ಮಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದ ಬಾತ್ರೂಮ್ನಲ್ಲಿ “Bomb” ಎಂಬ ಪದವನ್ನು ಕಂಡ ಕೆಲವರು ತೀವ್ರ ಆತಂಕಕ್ಕೆ ಒಳಗಾದರು. ವಿಮಾನದಲ್ಲಿ ಒಟ್ಟು 168 ಪ್ರಯಾಣಿಕರು ಇದ್ದರು. ಈ ಬರಹವನ್ನು ಕಂಡು ತಕ್ಷಣವೇ ಸ್ಫೋಟಕ ವಸ್ತು ಇರಬಹುದೆಂಬ ಶಂಕೆ ವ್ಯಕ್ತವಾಯಿತು.
ಇದನ್ನು ಓದಿ : ಹೆರಿಗೆ ಬಳಿಕ ಹೃದಯಾಘಾತ – ಜೀವ ಕಳೆದುಕೊಂಡ ಬಾಣಂತಿ

ವಿಮಾನವನ್ನು ತುರ್ತು ಲ್ಯಾಂಡಿಂಗ್ ಗೆ ಡೈವರ್ಟ್ ಮಾಡಿದ ಪೈಲಟ್
ಸ್ಥಿತಿಗತಿಯ ಗಂಭೀರತೆಯನ್ನು ಗ್ರಹಿಸಿದ ಪೈಲಟ್ರು ಕೂಡಲೇ ವಿಮಾನವನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಿ, ಮಧ್ಯರಾತ್ರಿ ತುರ್ತು ಲ್ಯಾಂಡಿಂಗ್ ಮಾಡಿಸಿದರು. ವಿಮಾನ ನೆಲಕ್ಕೆ ಇಳಿದ ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ವಿಮಾನವನ್ನು ಪರಿಶೀಲಿಸಿದರು.
ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ
ಇನ್ನು ವಿಮಾನದ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಈ ಹುಸಿ ಬೆದರಿಕೆಯು ಕೆಲ ಹೊತ್ತು ಆತಂಕ ಸೃಷ್ಟಿಸಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭ
ಈ ಕುರಿತಂತೆ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾತ್ರೂಮ್ನಲ್ಲಿ ಬರಹ ಬರೆದವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಾರಂಭವಾಗಿದೆ. ಆರೋಪಿಗೆ ನಿಜವಾದ ಉದ್ದೇಶವೇನು, ಬೇರೇನಾದರೂ ಶಂಕಾಸ್ಪದ ಹಿನ್ನೆಲೆ ಇದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ವಿಮಾನದಲ್ಲಿ ಬಾಂಬ್ ಇದೆ… ಕೆಂಪೇಗೌಡ ಏರ್ಪೋರ್ಟ್ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್!




