Bagalkote : ಹೆರಿಗೆಗೆ ಬಂದಿದ್ದ ಬಾಣಂತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಆಘಾತಕಾರಿ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯಲ್ಲಿ ನಿನ್ನೆ ಸಂಜೆ ಶೋಕಾಂತಿಕ ಘಟನೆ ನಡೆದಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪೂರ್ಣಿಮಾ ರಾಠೋಡ್ ಎಂಬ ಮಹಿಳೆ (ಮೂಲತಃ ಬೆಳಗಾವಿ ಜಿಲ್ಲೆಯ ಅರೆಬೆಂಚಿ ತಾಂಡ), ಸಿಜೇರಿಯನ್ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿಜೇರಿಯನ್ ನಂತರ ಸ್ಥಿತಿ ಸಮಸ್ಥೆ
ಪೂರ್ಣಿಮಾ ರಾಠೋಡ್ ಅವರನ್ನು ನಿನ್ನೆ (ಅ.18) ಮಧ್ಯಾಹ್ನ 12.30ರ ಸುಮಾರಿಗೆ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ವೈದ್ಯರು ಸಿಜೇರಿಯನ್ ಪ್ರಕ್ರಿಯೆ ಮೂಲಕ ಹೆರಿಗೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಬಾಣಂತಿ ಮೊದಲಿಗೆ ಆರಾಮವಾಗಿ ಇದ್ದರೂ, ಸಂಜೆ 7 ರಿಂದ 7.30ರ ನಡುವೆ ಪೂರ್ಣಿಮಾ ತೀವ್ರ ತೊಂದರೆಗೆ ಒಳಗಾದರು.
ಹೃದಯಾಘಾತದಿಂದ ಸಾವು – ಕುಟುಂಬಸ್ಥರಿಂದ ಗಂಭೀರ ಆರೋಪ
ಇತ್ತ ಬಾಣಂತಿ ಪೂರ್ಣಿಮಾ ಸಾವಿನ ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಜೇರಿನ್ ಬಳಿಕ ಪೂರ್ಣಿಮಾ ಬಳಲುತ್ತಿದ್ದಳು. ಈ ವೇಳೆ ವೈದ್ಯರು ಬಾರದೇ ನರ್ಸ್ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಮೇಲೆ ಬಾಣಂತಿ ಪೂರ್ಣಿಮಾ ಮತ್ತಷ್ಟು ಒದ್ದಾಡಿ ಪ್ರಾಣ ಬಿಟ್ಟಳು ಅಂತ ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನು ನೋಡಿ : ಜೀವ ಕಳೆದುಕೊಂಡ ಬಾಣಂತಿ.. ವೈದ್ಯರ ವಿರುದ್ಧ ಆಕ್ರೋಶ

ವೈದ್ಯರಿಂದ ಸ್ಪಷ್ಟನೆ – ಎಲ್ಲಾ ಚಿಕಿತ್ಸಾ ಕ್ರಮ ಅನುಸರಿಸಲಾಗಿದೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆಯ ವೈದ್ಯರು, “ಬಾಣಂತಿಗೆ ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಸಿಜೇರಿಯನ್ ಬಳಿಕ ಏಕಾಏಕಿ ಬಿಪಿ ಕಡಿಮೆಯಾಯಿತು. ಹೃದಯಾಘಾತ ಸಂಭವಿಸಿದ್ದು, ನಾವು ಎಲ್ಲ ಪ್ರಯತ್ನ ಮಾಡಿದರೂ ಜೀವ ಉಳಿಸಲಿಲ್ಲ. ಮಗುವಿನ ಆರೋಗ್ಯ ಸ್ಥಿರವಾಗಿದೆ,” ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ವಿರುದ್ಧ ಕ್ರಮದ ಆಗ್ರಹ
ಮೃತಳ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ವೈದ್ಯರ ಗೈರುಹಾಜರೇ ಈ ದುರಂತದ ಮೂಲ ಕಾರಣವಾಗಿದೆ ಎಂದು ಅವರು ಪಟ್ಟುಹಿಡಿದಿದ್ದಾರೆ.

ಇದನ್ನು ಓದಿ : ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮದುವೆ..?




