Mysuru : ದಸರಾ ರಜೆ ಹಿನ್ನಲೆ ಸ್ನಾನ ಮಾಡಲು ಕೆರೆಗೆ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ದಸರಾ ರಜೆ ಹಿನ್ನಲೆ ಸ್ನಾನ ಮಾಡಲು ಕೆರೆಗೆ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಮೋಹಿತ್ (9) ಮತ್ತು ಆರ್ಯ (9) ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಲಕರು ಮೂರನೇ ಹಾಗೂ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಇದನ್ನು ಓದಿ : ದೀಪದ ಬೆಂಕಿಯಿಂದ ಮನೆ ಸುಟ್ಟು ಕರಕಲು – 7 ಮಂದಿಗೆ ಗಾಯ

ದಸರಾ ರಜೆ ಹಿನ್ನಲೆಯಲ್ಲಿ ತಮ್ಮ ಊರಾದ ಬದನವಾಳು ಗ್ರಾಮದಲ್ಲಿದ್ದಾಗ, ಸ್ನೇಹಿತರಾದ ಇಬ್ಬರು ಸೈಕಲ್ನಲ್ಲಿ ಸ್ಥಳೀಯ ಕೆರೆಗೆ ತೆರಳಿ ಈಜಲು ಇಳಿದಿದ್ದರು. ಈ ವೇಳೆ ನೀರಿನ ಆಳತೆ ಅಂದಾಜಿಸದೆ ಕೆರೆಯ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಇನ್ನು ಈ ಘಟನೆಯ ನಂತರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ನೋಡಿ : ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ದಾರುಣ ಅಂತ್ಯ




