Bagalkot : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹಚ್ಚಿದ ದೀಪವೇ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ಅವಾಂತರ ಉಂಟುಮಾಡಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹಚ್ಚಿದ ದೀಪವೇ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ಅವಾಂತರ ಉಂಟುಮಾಡಿದೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿ ಪಟ್ಟಣದಲ್ಲಿ ರಾಜೇಂದ್ರ ತಪಶೆಟ್ಟಿ ಎಂಬುವವರ ಮನೆ ಎದುರು ಹಚ್ಚಿದ ದೀಪದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆ ಸೇರಿದಂತೆ ಎರಡು ಬೈಕುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಮನೆ ಮುಂದೆ ಬಿದ್ದಿದ್ದ ಆಯಿಲ್ ಮತ್ತು ಗ್ರೀಸ್ಗೆ ದೀಪದ ಬೆಂಕಿ ತಗುಲಿದ ಪರಿಣಾಮ ಬೆಂಕಿ ವೇಗವಾಗಿ ವ್ಯಾಪಿಸಿ, ಮನೆ ಮುಂದಿದ್ದ ಎರಡು ಬೈಕ್ಗಳು ಸುಟ್ಟಿವೆ. ಬಳಿಕ ಬೆಂಕಿ ಮನೆಗೆ ಪ್ರವೇಶಿಸಿ ಅಡುಗೆ ಮನೆಯ ಸಿಲಿಂಡರ್ ಸೋರಿಕೆಯಿಂದ ತೀವ್ರ ಅಗ್ನಿ ಅವಘಡ ಉಂಟಾಗಿದೆ. ಈ ಅವಘಡದಲ್ಲಿ ತಪಶೆಟ್ಟಿ ಅವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕುಟುಂಬದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನು ನೋಡಿ : ದೀಪಾವಳಿ ಅವಾಂತರ: ದೀಪದ ಬೆಂಕಿಯಿಂದ ಮನೆ ಸುಟ್ಟು ಕರಕಲು
ಆದರೆ ಮೇಲ್ಮಹಡಿಯಲ್ಲಿ ವಾಸವಿದ್ದ ಉಮೇಶ್ ಮೇಟಿ ಅವರ ಮನೆಯ ನಿವಾಸಿಗಳಿಗೆ ಬೆಂಕಿ ತಗುಲಿ ಗಾಯವಾಗಿದೆ. ಒಟ್ಟು ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಬಾಗಲಕೋಟೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಕಲಾದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ದೇವಿರಮ್ಮನ ದರ್ಶನಕ್ಕೆ ಕಾದು ನಿಂತ ಭಕ್ತರಿಗೆ ಮಳೆ ಸವಾಲು




