Deepavali Special : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಹಾಗೂ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದ ಹೆಸರನ್ನು ಇಟ್ಟುಕೊಂಡು ಪಟಾಕಿ ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗೆ ಇಟ್ಟು ಪಟಾಕಿಗಳನ್ನ ಮಾರಾಟ ಮಾಡ್ತಿವೆ. ಈಗಾಗಲೇ ಹಲವರು ಈ ಪಟಾಕಿಗಳನ್ನ ಖರೀದಿಸಿ ದೀಪಾವಳಿಗೂ ಮುನ್ನವೇ ಪಟಾಕಿ ಸಿಡಿಸಿ ಫುಲ್ ಖುಷಿಯಾಗಿದ್ದಾರೆ.

Deepavali Special : ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದ್ದು, ಈಗಾಗಲೇ ರಾಜ್ಯದಾದ್ಯಂತ ಹಬ್ಬದ ಸಡಗರದ ಸಿದ್ಧತೆಗಳು ಜೋರಾಗಿದೆ. ಶಾಪಿಂಗ್ ಮಾಲ್ಗಳು, ಪಟಾಕಿ ಅಂಗಡಿಗಳು ಹಾಗೂ ತಿಂಡಿ ತಿನಿಸು ಕೇಂದ್ರಗಳು ಜನರಿಂದ ತುಂಬಿದೆ. ಈ ನಡುವೆ, ಈ ಬಾರಿಗೆ ಪಟಾಕಿ ಮಾರುಕಟ್ಟೆಯಲ್ಲಿ ವಿಶೇಷವಾಗಿ ಸೂಪರ್ ಹಿಟ್ ಚಿತ್ರಗಳ ಹೆಸರಿನಲ್ಲಿ ಬಿಡುಗಡೆ ಆಗಿವೆ.
ಹೌದು..ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ (KGF) ಮತ್ತು ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅಭಿನಯದ ಕಾಂತಾರ (Kantara)ಸಿನಿಮಾ ಹೆಸರುಗಳಿಂದ ಮಾರಾಟವಾಗ್ತಿರುವ ಬ್ರ್ಯಾಂಡ್ ಪಟಾಕಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಾಗಿದ್ದು, ಭಾರೀ ಬೇಡಿಕೆ ಗಳಿಸಿವೆ.
ಇದನ್ನೂ ಓದಿ : Kaveri Theerthodbhava: ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ..
ಮಕ್ಕಳು, ಯುವಕರು ಮಾತ್ರವಲ್ಲದೇ ಎಲ್ಲ ವಯಸ್ಸಿನವರು ಈ ಸಿನಿಮಾ ಶೀರ್ಷಿಕೆ ಇರುವ ಪಟಾಕಿಗಳಿಗೆ ಮೊರೆ ಹೋಗುತ್ತಿದ್ದು, ಈ ಪಟಾಕಿಗಳನ್ನು ಶಾಪಿಂಗ್ ಮಾಡಿಕೊಂಡು ಹಬ್ಬದ ಖುಷಿಯಲ್ಲಿದ್ದಾರೆ. ಕೆಲವರು ದೀಪಾವಳಿಗೂ ಮುನ್ನವೇ ಈ ಪಟಾಕಿಗಳನ್ನು ಸಿಡಿಸಿ ಹಬ್ಬದ ಸಡಗರವನ್ನು ಆರಂಭಿಸಿದ್ದಾರೆ. ಹಲವು ಅಂಗಡಿಗಳಲ್ಲಿ ಈ ಪಟಾಕಿಗಳಿಗೆ ತೀವ್ರ ಬೇಡಿಕೆ ಹೆಚ್ಚಿದ್ದು, ತಮಿಳುನಾಡಿನ ಹೊಸೂರು ಸೇರಿದಂತೆ ಪಕ್ಕದ ರಾಜ್ಯಗಳಲ್ಲಿಯೂ ಈ ಪಟಾಕಿಗಳು ಫೇಮಸ್ ಆಗಿವೆ. ಮಾರಾಟಗಾರರು ಈ ರೀತಿಯ Populer Brand ಸ್ಟ್ರಾಟೆಜಿ ಬಳಸಿಕೊಂಡು, ಸಿನಿಮಾ ಅಭಿಮಾನಿಗಳ ಭಾವನೆಗಳನ್ನು ಮಾರುಕಟ್ಟೆಗಿಳಿಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ.
ಅದೇನೆ ಆಗಲಿ, ದೀಪಾವಳಿ ಮಾರುಕಟ್ಟೆಯಲ್ಲಿ ಕೆ.ಜಿ.ಎಫ್ ಮತ್ತು ಕಾಂತಾರ ಪಟಾಕಿಗಳು ಈಗಾಗಲೇ ಭರ್ಜರಿಯಾಗಿ ಮಾರಾಟವಾಗ್ತಿದೆ.
MUST WATCH :ಗುಬ್ಬಿ ಜನರಿಗೆ ಗುಡ್ ನ್ಯೂಸ್ ಕೊಟ್ಟ ಶಾಸಕ S R SRINIVAS | GUBBI NEWS




