Raju Talikote : ನಗುವಿನ ನಶೆಯಲ್ಲಿ ತೇಲಿಸಿ, ನಮ್ಮನ್ನು ನಕ್ಕು ನಗಿಸುತ್ತಿದ್ದ ಕಲಿಯುಗದ ಕುಡುಕ ಎಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ರಾಜು ತಾಳಿಕೋಟೆ ಮಿಂಚಿ ಮರೆಯಾಗಿದ್ದಾರೆ.

ನಗುವಿನ ನಶೆಯಲ್ಲಿ ತೇಲಿಸಿ, ನಮ್ಮನ್ನು ನಕ್ಕು ನಗಿಸುತ್ತಿದ್ದ ಕಲಿಯುಗದ ಕುಡುಕ ಎಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ರಾಜು ತಾಳಿಕೋಟೆ ಮಿಂಚಿ ಮರೆಯಾಗಿದ್ದಾರೆ. ನಿನ್ನೆ (ಅ.13) ಸಂಜೆ ಶೈನ್ ಶೆಟ್ಟಿ ಅಭಿನಯದ ಶಂಕರಾಭರಣ ಚಿತ್ರೀಕರಣದ ಬಳಿಕ ವಿಶ್ರಾಂತಿ ಪಡೆಯುವಾಗ ಹಠಾತ್ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನು ನೋಡಿ : DROP ಕೊಡ್ತೀನಿ ಅಂತ ಹೇಳಿ ಮಹಿಳೆಯ ಮೇಲೆ ಕಾಮುಕರ ಅತ್ಯಾಚಾರ

ಇಸ್ಲಾಂ ಧರ್ಮಕ್ಕೆ ಸೇರಿದರೂ, ನಾಟಕ ಹಾಗೂ ಹಾಸ್ಯ ರಂಗದಲ್ಲಿ ಕನ್ನಡ ನಾಡಿನ ಹೃದಯ ಗೆದ್ದ ರಾಜು, ತಮ್ಮ ವಿಭಿನ್ನ ಶೈಲಿಯ ಮಾತು, ಅಭಿನಯ ಹಾಗೂ ನಿಜ ಜೀವನದ ಸರಳತೆಗೆ ಹೆಸರುವಾಸಿಯಾಗಿದ್ದರು. ಇಬ್ಬರು ಪತ್ನಿ ಮತ್ತು ಐದು ಮಕ್ಕಳನ್ನು ತ್ಯಜಿಸಿ, ಅವರು ಇಹಲೋಕವನ್ನು ತ್ಯಜಿಸಿದ್ದಾರೆ.

ಇನ್ನು ರಾಜು ತಾಳಿಕೋಟೆ ಅವರ ಸಾವಿನ ಸುದ್ದಿ ಇಡೀ ನಾಟಕ, ಚಿತ್ರ, ಹಾಗೂ ಹಾಸ್ಯ ರಂಗಕ್ಕೆ ಭಾರಿ ಆಘಾತ ತಂದಿದ್ದು, ಹಲವು ಕಲಾವಿದರು ಹಾಗೂ ಅಭಿಮಾನಿಗಳು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ವೃತ್ತಿರಂಗ ಭೂಮಿ ಹಾಗೂ ಚಿತ್ರರಂಗದಿಂದ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದ್ದಾರೆ.
ಇದನ್ನು ಓದಿ : ನಿತಿನ್ ಗಡ್ಕರ್ ದೇಶದ ಪ್ರಧಾನಿ ಆಗ್ತಾರೆ ಅದೇ “ನವೆಂಬರ್ ಕ್ರಾಂತಿ”




