Santosh Lad : ನವೆಂಬರ್ ಕ್ರಾಂತಿ, ರಾಜಕೀಯ ಸಂಕ್ರಾಂತಿ ಇತ್ಯಾದಿ ಅಂತೆ-ಕಂತೆಗಳ ನಡುವೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟ್ ಮಾಡಿದ್ದಾರೆ.

ನವೆಂಬರ್ ಕ್ರಾಂತಿ, ರಾಜಕೀಯ ಸಂಕ್ರಾಂತಿ ಇತ್ಯಾದಿ ಅಂತೆ-ಕಂತೆಗಳ ನಡುವೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟ್ ಮಾಡಿದ್ದು, ಇನ್ನೂ ಈ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಬೀದರ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಡಿನ್ನರ್ ಮೀಟಿಂಗ್ನಲ್ಲಿ ಸಂಪುಟ ಪುನರ್ರಚನೆ ಬಗ್ಗೆ ಯಾವುದೇ ಚರ್ಚೆಯಿಲ್ಲ. ಸಂಪುಟ ಪುನರ್ರಚನೆ ಮಾಡುವ ಅಧಿಕಾರ ಸಿಎಂ ಹಾಗೂ ಡಿಸಿಎಂ ಪೂರ್ಣ ಅಧಿಕಾರ ಇದೆ, ಮಾಡಲಿ. ಅಲ್ಲದೆ ನಮಗೂ ಕೇಂದ್ರದ ʻನವಂಬರ್ ಕಾಂತ್ರಿʼ ಬಗ್ಗೆ ನಮಗೂ ಕುತೂಹಲವಿದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ರೀತಿಯ ಮಾಹಿತಿ ಬರುತ್ತಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿ : ಎರಡು ದಿನ ಕಲ್ಯಾಣ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಪ್ರವಾಸ

RSS ನಿಷೇಧ ವಿಚಾರವಾಗಿ ಸಂತೋಷ್ ಲಾಡ್ ಪ್ರತಿಕ್ರಿಯೆ
“145 ಕೋಟಿ ಭಾರತೀಯರೂ ದೇಶಭಕ್ತರೇ. ದೇಶ ಪ್ರೇಮ ಆರ್ಎಸ್ಎಸ್ಗೆ ಮಾತ್ರವಲ್ಲ. ಈ ಹಿಂದೆ 3 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಸರ್ದಾರ್ ವಲ್ಲಭಭಾಯ್ ಪಟೇಲ್ರ ಪ್ರತಿಮೆ ನಿರ್ಮಿಸಲಾಯಿತು. ಪಟೇಲ್ ಅವರು ಕಾಂಗ್ರೆಸ್ನಲ್ಲಿದ್ದಾಗಲೇ ಬಿಜೆಪಿಯವರು ಪ್ರತಿಮೆ ವಿರೋಧಿಸಿದ್ದರು” ಎಂದು ಬಿಜೆಪಿ ವಿರುದ್ಧ ಸಂತೋಷ್ ಲಾಡ್ ಗಂಭೀರ ಟೀಕೆ ನಡೆಸಿದರು.
ಈ ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡರೆ, ರಾಜ್ಯ ರಾಜಕಾರಣ ಇನ್ನೂ ಹಲವು ತಿರುವುಗಳನ್ನು ಕಾಣುವ ಸಾಧ್ಯತೆಯಿದೆ.
ಇದನ್ನು ನೋಡಿ : ನಮ್ಮನ್ನು ನಿಂದಿಸಬೇಡಿ , ಸಹಕರಿಸಿ ಅಧಿಕಾರಿಗಳಿಗೆ ಪೌರಕಾರ್ಮಿಕರ ಮನವಿ





