KANTARA CHAPTER 1: ಕಾಂತಾರ ಚಾಪ್ಟರ್-1 ಸಿನಿಮಾದ ದೃಶ್ಯವೈಭವ. ಸಾಹಸ ಸನ್ನಿವೇಶಗಳ ಝಲಕ್, ಕ್ಲೈಮ್ಯಾಕ್ಸ್ (Kantara Climax) ಹೋರಾಟ ಹೇಗಿತ್ತು ಅಂತಾ ರಿಷಬ್ ಶೆಟ್ಟಿ (Rishab Shetty) ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.

KANTARA CHAPTER 1 : ‘ಕಾಂತಾರ ಚಾಪ್ಟರ್-1’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳು ತೆರೆ ಮೇಲೆ ನಿಜಕ್ಕೂ ಅಬ್ಬಬ್ಬಾ ಅನ್ನಿಸುವಂಥ -ದ್ದಾಗಿವೆ. ಸಾಹಸ, ಶಕ್ತಿ, ಸಂವೇದನೆಗಳ ಸಂಗಮವಾಗಿ ಮೂಡಿಬಂದಿರುವ ಈ ದೃಶ್ಯಗಳ ಹಿಂದಿರುವ ಕಥೆ ಮಾತ್ರ ನಿಜಕ್ಕೂ ಮೈಜುಮ್ಮೇನ್ನಿಸುವಂತ್ತಾಗಿದೆ.
ಹೌದು.. ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ, ಶೂಟಿಂಗ್ ಸಮಯದಲ್ಲಿ ಅನುಭವಿಸಿದ್ದ ನೋವು, ಶ್ರಮ, ಕಷ್ಟಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲ ಅಪರೂಪದ ಫೋಟೋಗಳೊಂದಿಗೆ ಶೇರ್ ಮಾಡಿದ ಈ POST ನಲ್ಲಿ, CLIMAX ದೃಶ್ಯಗಳ ಶೂಟಿಂಗ್ ವೇಳೆ ಅವರ ಕಾಲು ಊದಿರುವುದು, ದೇಹ ನಿತ್ರಾಣಗೊಂಡಿರುವುದು, ಮತ್ತು ಸುಸ್ತಾಗಿ ಮಲಗಿರುವ ದೃಶ್ಯಗಳಿವೆ.

ಇದನ್ನ ಓದಿ : ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ – ಕಾಂತಾರ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಸುಸ್ತಾಗಿ ಮಲಗಿದ್ದ ರಿಷಬ್
ಇನ್ನು ತಮ್ಮ ಪೋಸ್ಟ್ ನಲ್ಲಿ ರಿಷಬ್ ಶೆಟ್ಟಿ “ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ, ಸುಸ್ತಾಗಿ ಮಲಗಿದ್ದ ರಿಷಬ್ ಶೆಟ್ಟಿ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ ಅಂದ್ರೆ ಅದಕ್ಕೆ ತೆರೆಹಿಂದೆ ನಾವು ಪಟ್ಟ ಶ್ರಮದ ಜೊತೆಗೆ ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು” ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರೇಮಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದು, ಶೂಟಿಂಗ್ ಸಂದರ್ಭದ ಕೆಲ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
WATCH THIS: RSS ನಿಂದ ಶತಾಬ್ದಿ ಪಥ ಸಂಚಲನ ಅರಸೀಕೆರೆಯಲ್ಲಿ ರಾರಾಜಿಸಿದ ಧ್ವಜ | ARSIKERE NEWS |
\




