MYSURU MURDER : ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಮೈಸೂರಿನಲ್ಲಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder) ಮಾಡಿದ ಘೋರ ಘಟನೆ ಇಂದು (ಮಂಗಳವಾರ) ಬೆಳಿಗ್ಗೆ 11:30ರ ಸುಮಾರಿಗೆ ನಡೆದಿದ್ದು, ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಕಾರಿನಲ್ಲಿ ಸಾಗುತ್ತಿದ್ದ ವೇಳೆ ಐವರ ತಂಡ ಮಾರಕಾಸ್ತ್ರಗಳಿಂದ ದಾಳಿ
ಹತ್ಯೆಯಾದ ವ್ಯಕ್ತಿಯನ್ನು ಕ್ಯಾತಮಾರನಹಳ್ಳಿಯ ವೆಂಕಟೇಶ್ ಅಲಿಯಾಸ್ ಗಿಲ್ಕಿ (38) ಎಂದು ಗುರುತಿಸಲಾಗಿದೆ. ನಗರದ ವಸ್ತು ಪ್ರದರ್ಶನದ ಮುಂಭಾಗದಲ್ಲಿ ಈ ಕೃತ್ಯ ನಡೆದಿದ್ದು, Shift Car ನಲ್ಲಿ ತೆರಳುತ್ತಿದ್ದ ವೆಂಕಟೇಶ್ ಮೇಲೆ ಐವರ ತಂಡ ಆಟೋದಲ್ಲಿ ಆಗಮಿಸಿ ದಾಳಿ ನಡೆಸಿದೆ. ಕಾರ್ನಲ್ಲಿ ತೆರಳುತ್ತಿದ್ದ ವೆಂಕಟೇಶ್ ಮೇಲೆ ಆಟೋದಲ್ಲಿ ಆಗಮಿಸಿದ ಐವರ ತಂಡ ಅಡ್ಡ ಹಾಕಿ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹಿಂದಿನ ವೈಷಮ್ಯವೇ ಕಾರಣ?
ವೆಂಕಟೇಶ್, ಈ ಹಿಂದೆ ಹತ್ಯೆಯಾದ Rowdy Sheeter ಕಾರ್ತಿಕ್ನ ಸಹಚರರಾಗಿದ್ದು, ಕಾರ್ತಿಕ್ನ ಕೊಲೆಯ ಬಳಿಕ ಆತನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹಳೇ ವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : 6 ತಿಂಗಳಿಂದಲೂ ಊರಲ್ಲಿ ಚರಂಡಿ ಇಲ್ಲ- ಗಲಾಟೆ ಮಾಡ್ಕೊಂಡು ರಸ್ತೆನೇ ಮಾಡ್ಲಿಲ್ಲ
CCTV ದೃಶ್ಯಗಳಲ್ಲಿ ಪೂರ್ಣ ಘಟನೆ ದಾಖಲೆ
ಘಟನೆಯ ಸಂಪೂರ್ಣ ಚಿತ್ರಣ ಸ್ಥಳೀಯ ಅಂಗಡಿಯೊಂದರ CCTV ಯಲ್ಲಿ ದಾಖಲಾಗಿದ್ದು, ಪೊಲೀಸರು Ouick Action ಆರಂಭಿಸಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಸುಂದರ್ ರಾಜ್ ಹಾಗೂ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದಲ್ಲಿ ಭೀತಿಯ ವಾತಾವರಣ
ಇನ್ನು ಮುಖ್ಯ ರಸ್ತೆಯಲ್ಲೇ ಈ ಹತ್ಯೆ ನಡೆದಿದ್ದು ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ. ಸಾರ್ವಜನಿಕ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ. ಘಟನೆಯ ನಂತರ ಸ್ಥಳದಲ್ಲಿ ಜನಸಂಖ್ಯೆ ಜಮಾಯಿಸಿ ಉದ್ವಿಗ್ನತೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Kantara Chapter 1 : Kantara ತೆರೆಹಿಂದಿನ ಅನುಭವ ಹಂಚಿಕೊಂಡ Rishab Wife Pragathi Shetty




