Arasikere Theft Case : ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಸುನ್ನಿ ಚೌಕ್ ಪ್ರದೇಶದಲ್ಲಿ ಸರಣಿ ಕಳ್ಳತನ ನಡೆದಿದೆ. ಅರಸೀಕೆರೆ ಕಳ್ಳತನ ಪ್ರಕರಣದಲ್ಲಿ ಕಳ್ಳರು ಮೂರು ಮನೆಗಳಲ್ಲಿ ನುಗ್ಗಿ ಲಕ್ಷಾಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Arasikere Theft Case : ರಾಜ್ಯದಲ್ಲಿ ಹಲವೆಡೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡುಬರ್ತಿದ್ದು, ಸಾರ್ವಜನಿಕರು ಭೀತಿ ಪಡುವಂತಾಗಿದೆ. ಇತ್ತ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿಯೂ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ನಗರದ ಸುನ್ನಿ ಚೌಕ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ಪ್ರಕರಣ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
Arasikere Theft Case : ಸುನ್ನಿ ಚೌಕ್ನಲ್ಲಿ ಸರಣಿ ದಾಳಿ
ಇತ್ತೀಚೆಗೆ ರಾಜ್ಯದ ಹಲವೆಡೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಅಲೆ ಈಗ ಅರಸೀಕೆರೆ ತಾಲ್ಲೂಕಿನ ಸುನ್ನಿ ಚೌಕ್ ಪ್ರದೇಶಕ್ಕೂ ತಲುಪಿದೆ.ಭಾನುವಾರ ರಾತ್ರಿ ಕಳ್ಳರು ನಗರದಲ್ಲಿನ ಮೂರು ಮನೆಗಳಲ್ಲಿ ಏಕಕಾಲದಲ್ಲಿ ಕಳ್ಳತನ ನಡೆಸಿದ್ದು, ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ.
ಕಳ್ಳರ ಕೈಚಳಕ: ಮೂರು ಮನೆಗಳಲ್ಲಿ ಏಕಕಾಲದ ದಾಳಿ
ಸುನ್ನಿ ಚೌಕ್ನ ಫಾರೂಕ್ ಬಿನ್ ಬಾಶುಲಾಲ್, ಅಜ್ಜುಬಾ ಮತ್ತು ಸಲ್ಮಾ ಎಂಬುವರ ಮನೆಗಳು ಕಳ್ಳರ ಟಾರ್ಗೆಟ್ ಆಗಿವೆ.
ಮನೆ ಮಾಲೀಕರು ಇಲ್ಲದಿದ್ದ ವೇಳೆ ಕಳ್ಳರು ಕಿಟಕಿ ಮುರಿದು ಒಳ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: Tumakuru News : ಹಿಂದೂ-ಮುಸ್ಲಿಂ ಏಕತೆಯಲ್ಲಿ ಗಣೇಶ ವಿಸರ್ಜನಾ ಮಹೋತ್ಸವ
Arasikere Theft Case : ಪೊಲೀಸ್ ತನಿಖೆ ಆರಂಭ
ಘಟನೆ ಬಳಿಕ ಮನೆ ಮಾಲೀಕರು ತಕ್ಷಣವೇ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು.
ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಸನದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು( Dog squad and fingerprint experts ) ಕರೆಸಿ, ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ.ಪೊಲೀಸರು ಕಳ್ಳರನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮುಖಂಡರ ಭೇಟಿ ಮತ್ತು ಸಾರ್ವಜನಿಕರ ಬೇಡಿಕೆ
ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಕಾಂಗ್ರೆಸ್ ಮುಖಂಡ ಸೈಯದ್ ಸಿಕಂದರ್ (Syed Sikandar) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅವರು ಪೊಲೀಸರೊಂದಿಗೆ ಮಾತನಾಡಿ, ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು: ಸಾರ್ವಜನಿಕರಲ್ಲಿ ಆತಂಕ
ರಾಜ್ಯದೆಲ್ಲೆಡೆ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರು ಪೆಟ್ರೋಲಿಂಗ್ ಹೆಚ್ಚಿಸಿ, ಸಿಸಿಟಿವಿ (cctv) ಕ್ಯಾಮೆರಾಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ತನಿಖೆಯ ಮುಂದಿನ ಹಂತ: ಆರೋಪಿ ಪತ್ತೆಗೆ ಶ್ವಾನದಳ ಸಜ್ಜು
ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳದಿಂದ ಕೆಲವು ಪ್ರಮುಖ ಸುಳಿವುಗಳನ್ನು ಪತ್ತೆಹಚ್ಚಿದ್ದು, ತನಿಖೆ ಗಟ್ಟಿಯಾಗಿ ಮುಂದುವರಿಯುತ್ತಿದೆ.
ಪೊಲೀಸರು ಸ್ಥಳೀಯ ಮಾಹಿತಿ ಸಂಗ್ರಹಿಸಿ, ಶೀಘ್ರದಲ್ಲೇ ಕಳ್ಳರ ಸುಳಿವು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.
MUST WATCH : 91 ವಯಸ್ಸಿನ ವೃದ್ಧನ ಕಣ್ಣೀರ ಕಥೆ ಒಂದೊತ್ತು ಊಟಕ್ಕೂ ವೃದ್ಧನ ಪರದಾಟ | CN HALLI NEWS |




