Tumakuru News: ತುಮಕೂರು ನಾಗವಲ್ಲಿ ಗ್ರಾಮದಲ್ಲಿ ನಡೆದ ಗಣೇಶ ವಿಸರ್ಜನಾ ಮಹೋತ್ಸವ ಹಿಂದೂ-ಮುಸ್ಲಿಂ ಏಕತೆಯ ನಾದವಾಗಿ ಪರಿವರ್ತಿತವಾಯಿತು. ಎಲ್ಲಾ ಜನಾಂಗಗಳ ಗ್ರಾಮಸ್ಥರು ಒಟ್ಟಾಗಿ ಭಾಗವಹಿಸಿ ಬಾಂಧವ್ಯ ಮತ್ತು ಸೌಹಾರ್ದತೆಯ ಮಾದರಿ ಪ್ರದರ್ಶಿಸಿದರು.

Tumakuru News : ತುಮಕೂರು ನಾಗವಲ್ಲಿ ಗ್ರಾಮದಲ್ಲಿ ನಡೆದ ಗಣೇಶ ವಿಸರ್ಜನಾ ಮಹೋತ್ಸವ ಹಿಂದೂ-ಮುಸ್ಲಿಂ ಏಕತೆಯ ನಾದವಾಗಿ ನಡೆದಿತು. 18ಕ್ಕೂ ಹೆಚ್ಚು ಜನಾಂಗದವರು ಭಾಗವಹಿಸಿ ಬಾಂಧವ್ಯ ಸಂಭ್ರಮಕ್ಕೆ ಸಾಕ್ಷಿಯಾದರು.
ತುಮಕೂರು ಗಣೇಶ ವಿಸರ್ಜನಾ ಮಹೋತ್ಸವ: ನಾಗವಲ್ಲಿ ಗ್ರಾಮದಲ್ಲಿ ಬಾಂಧವ್ಯ ಸಂಭ್ರಮ
ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಗ್ರಾಮದಲ್ಲಿ ಅದ್ದೂರಿಯಾಗಿ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ನಡೆಯಿತು.
ಈ ಸಂಭ್ರಮದಲ್ಲಿ ಜಾತಿ, ಧರ್ಮ, ಮತಭೇದವಿಲ್ಲದೆ 18ಕ್ಕೂ ಹೆಚ್ಚು ಜನಾಂಗಗಳ ಗ್ರಾಮಸ್ಥರು ಪಾಲ್ಗೊಂಡು ನಿಜವಾದ ಸೌಹಾರ್ದತೆಯ ಮಾದರಿ ಪ್ರದರ್ಶಿಸಿದರು.
ಇದನ್ನೂ ಓದಿ:ಸರ್ಕಾರದ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಯಲಿಗೆಳೆದ ಪ್ರಜಾಶಕ್ತಿ ಟಿವಿ
ನಾಗವಲ್ಲಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮತ್ತು ಏಕತೆ
ಗಣೇಶ ಮೂರ್ತಿಗೆ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಗಣೇಶನಿಗೆ ಬೃಹತ್ ಹಾರ ಹಾಕಿ “ಜೈ ವಿನಾಯಕ” ಎಂದು ಘೋಷಣೆ ಕೂಗಿದರು.
ಅದೇ ವೇಳೆ ಪಾನಕ ಮತ್ತು ಮಜ್ಜಿಗೆ ವಿತರಣೆ ಮಾಡಿ ಎಲ್ಲರಿಗೂ ಆತ್ಮೀಯ ಸ್ವಾಗತ ನೀಡಿದರು.
ತಮಟೆ, ವೀರಗಾಸೆ ಮತ್ತು ಗೊಂಬೆ ಕುಣಿತಗಳಿಂದ ಮೆರವಣಿಗೆಗೆ ಕಳೆ
ಮೆರವಣಿಗೆಯಲ್ಲಿ ತಮಟೆ ವಾದ್ಯಗಳು, ವೀರಗಾಸೆ, ಗೊಂಬೆ ಕುಣಿತಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತುಂಬಿದವು.
ಬಾಲಕ, ಯುವಕ, ಹಿರಿಯರು ಎಲ್ಲರೂ ಈ ಹಬ್ಬದಲ್ಲಿ ಹರ್ಷದಿಂದ ಭಾಗವಹಿಸಿದರು.
ತುಮಕೂರು ಗಣೇಶ ವಿಸರ್ಜನಾ ಮಹೋತ್ಸವ: ಧರ್ಮ ಸೌಹಾರ್ದತೆಯ ಮಾದರಿ
ಈ ಸಂದರ್ಭದಲ್ಲಿ ನೂರಾರು ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಗಣೇಶ ವಿಸರ್ಜನಾ ಮಹೋತ್ಸವವನ್ನು ನೇರವೇರಿಸಿದರು.
ಗ್ರಾಮದ ಹಿರಿಯರು ಮತ್ತು ಯುವಕರು ಹೇಳುವಂತೆ — “ಇದು ನಮ್ಮ ಊರಿನ ಪರಂಪರೆ. ಎಲ್ಲ ಧರ್ಮದವರೂ ಒಂದೇ ಮನಸ್ಸಿನಿಂದ ಹಬ್ಬ ಆಚರಿಸುತ್ತೇವೆ” ಎಂದು ಹೇಳಿದರು.
MUST WATCH : TUMAKURU NEWS | ಲಕ್ಷ ಲಕ್ಷ ಬಿಪಿಎಲ್ ಕಾರ್ಡ್ಗಳು ಅನರ್ಹ- ಸರ್ಕಾರದ ವಿರುದ್ಧ ಸಿಡಿದೆದ್ದ ಜನರು




