Tumakuru Illegal Mining: ಗುಬ್ಬಿ ತಾಲೂಕಿನ ನಾಗಸಂದ್ರ ಬಳಿಯ ಸುರಿಗೇನಹಳ್ಳಿ ಕಾವಲ್ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಮಧ್ಯದಲ್ಲಿ ಬೃಹತ್ ಗಾತ್ರದ ಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿವೆ.

ಕಲ್ಲು ಕ್ವಾರೆ ಅಲ್ಲದ ಜಾಗದಲ್ಲಿ ಬೃಹತ್ ಕಲ್ಲುಗಳ ಅಟ್ಟಹಾಸ!
ಗುಬ್ಬಿ ತಾಲೂಕಿನ ನಾಗಸಂದ್ರ ಬಳಿಯ ಸುರಿಗೇನಹಳ್ಳಿ ಕಾವಲ್ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಮಧ್ಯದಲ್ಲಿ ಬೃಹತ್ ಗಾತ್ರದ ಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿವೆ. ಹಿಟಾಚಿ ಯಂತ್ರಗಳನ್ನು ಬಳಸಿ ಕಲ್ಲುಗಳನ್ನು ಡ್ರಿಲ್ಲಿಂಗ್ ಮಾಡಿ ಬ್ಲಾಸ್ಟ್ ಮಾಡುತ್ತಿರುವ ದೃಶ್ಯ ಇದು ಒಂದು ಕಲ್ಲು ಕ್ವಾರಿಯಂತೇ ಅನ್ನಿಸುತ್ತದೆ. ಆದರೆ ಇದು ಯಾವುದೇ ಕ್ವಾರೆ ಅಲ್ಲ — ಸರ್ಕಾರಕ್ಕೆ ಸೇರಿರುವ ಜಮೀನು ,ತುಮಕೂರು ಜಿಲ್ಲೆಯಲ್ಲಿ ಗ್ರಾನೈಟ್ ದಂಧೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದು, ಇಲ್ಲೋಬ್ಬ ಭೂಪ ದುಡ್ಡಿನ ಆಸೆಗೆ ಪ್ರಕೃತಿಯ ಒಡಲಿಗೆ ಕೈ ಹಾಕಿ ಅಟ್ಟಹಾಸ ಮೆರೆಯುತ್ತಿದ್ದಾನೆ .
ಹಿಟಾಚಿಯಿಂದ ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್ ಕಾರ್ಯ
ಸರ್ಕಾರಿ ಜಮೀನಿನಲ್ಲಿ ಕಲ್ಲುಗಳನ್ನು ಹಿಟಾಚಿ ಯಂತ್ರದಿಂದ ತೆಗೆದು ಡ್ರಿಲ್ ಮೂಲಕ ಬ್ಲಾಸ್ಟ್ ಮಾಡಲಾಗುತ್ತಿದೆ.
ತುಮಕೂರುದಲ್ಲಿ ಇತ್ತೀಚೆಗೆ ಗ್ರಾನೈಟ್ ದಂಧೆ ನಿರಂತರವಾಗಿದ್ದು, ಪರಿಸರ ಹಾನಿಯಾಗುತ್ತಿದೆ.
ಅಕ್ರಮ ಗಣಿಗಾರಿಕೆ ತಿಂಗಳುಗಳಿಂದ ನಡೆಯುತ್ತಿದೆ.
ಸ್ಥಳೀಯರು “ನಮ್ಮದೇ ಜಾಗ, ಕ್ಲೀನಿಂಗ್ ಮಾಡ್ತಾಯಿದ್ದೇವೆ” ಎಂದು ಹೇಳುತ್ತಿದ್ದಾರೆ.
ದೊಡ್ಡ ಯಂತ್ರಗಳಿಂದ ಬ್ಲಾಸ್ಟ್ ಮಾಡಿ, ಊರಿನ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಇದನ್ನೂ ಓದಿ: ಮೂಲಭೂತ ಸೌಕರ್ಯರಹಿತ ಶಾಲೆಯಲ್ಲಿ ವಿದ್ಯಾರ್ಥಿಗಳ ಪರದಾಟ
Tumakuru Illegal Mining : ಗ್ರಾಮಸ್ಥರ ಜೀವಕ್ಕೆ ಅಪಾಯ!
ಬಂಡೆಗಳನ್ನು ಬ್ಲಾಸ್ಟ್ ಮಾಡುವಾಗ ಉಂಟಾಗುವ ಸ್ಫೋಟದಿಂದ ಅಕ್ಕಪಕ್ಕದ ಗ್ರಾಮಸ್ಥರ ಜೀವಕ್ಕೂ ಅಪಾಯ ಉಂಟಾಗಿದೆ. ತಿಂಗಳುಗಳಿಂದ ನಡೆಯುತ್ತಿರುವ ಈ ಅಕ್ರಮ ಗಣಿಗಾರಿಕೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮಸ್ಥರ ಆಕ್ರೋಶ
ಗ್ರಾಮಸ್ಥರೊಬ್ಬರು ಪ್ರಜಾಶಕ್ತಿ ಟಿವಿಗೆ ಹೇಳುವಂತೆ —
“ಈ ಅಕ್ರಮ ಗಣಿಗಾರಿಕೆ ತುಂಬ ದಿನಗಳಿಂದ ನಡೆಯುತ್ತಿದೆ. ಅಧಿಕಾರಿಗಳು ಕಣ್ಣೆದುರೇ ನಡೆಯುತ್ತಿರುವುದನ್ನು ಕಾಣದೆ ಇದ್ದಂತೆ ವರ್ತಿಸುತ್ತಿದ್ದಾರೆ. ಬ್ಲಾಸ್ಟಿಂಗ್ನಿಂದ ಶಬ್ದ ಮಾಲಿನ್ಯ ಹೆಚ್ಚಾಗಿದೆ, ರಸ್ತೆಗಳೆಲ್ಲಾ ಹಾಳಾಗಿವೆ.”
ಗ್ರಾಮಸ್ಥರ ಮಾತುಗಳಲ್ಲಿ ಸರ್ಕಾರದ ನಿರ್ಲಕ್ಷ್ಯ ಮತ್ತು ಅಕ್ರಮಗಾರರ ದುರಾಸೆಯ ಚಿತ್ರ ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ರಜಾಶಕ್ತಿ ಟಿವಿಯ ತನಿಖೆ
ತುಮಕೂರಿನಲ್ಲಿ ನಡೆಯುತ್ತಿರುವ ಈ ಅಕ್ರಮ ಗಣಿಗಾರಿಕೆಯ ಬಗ್ಗೆ ಸುದ್ದಿ ಕೇಳಿ, ಪ್ರಜಾಶಕ್ತಿ ಟಿವಿ ತಂಡ ಸ್ಥಳಕ್ಕೆ ಭೇಟಿ ನೀಡಿ ಗ್ರಾನೈಟ್ ಮಾಫಿಯಾವನ್ನು ಬಯಲಿಗೆಳೆದಿದೆ. ಸ್ಥಳದಲ್ಲಿದ್ದ ಯಂತ್ರೋಪಕರಣಗಳು, ಬ್ಲಾಸ್ಟಿಂಗ್ ಚಟುವಟಿಕೆ, ಮತ್ತು ಸರ್ಕಾರದ ಜಮೀನಿನ ನಾಶವನ್ನು ಕ್ಯಾಮೆರಾ ಕಣ್ಣಿಗೆ ಸೆರೆ ಹಿಡಿದಿದ್ದಾರೆ.
ಪ್ರಕೃತಿ ನಾಶದ ಬೆಲೆ ಯಾರು ಕಟ್ಟಬೇಕು?
ಸರ್ಕಾರದ ಜಮೀನಿನಲ್ಲಿ ನಡೆಯುತ್ತಿರುವ ಈ ರೀತಿಯ ಅಕ್ರಮ ಗಣಿಗಾರಿಕೆ ಪ್ರಕೃತಿಯ ಸಂಪತ್ತನ್ನು ಹಾಳುಮಾಡುವುದಲ್ಲದೆ ಜನರ ಸುರಕ್ಷತೆಯನ್ನೂ ಅಪಾಯಕ್ಕೆ ಒಳಪಡಿಸುತ್ತದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪರಿಸರ ನಾಶದ ಹಾದಿಯಲ್ಲಿ ಜಿಲ್ಲೆ ಸಾಗುವ ಸಾಧ್ಯತೆ ಇದೆ.
MUST WATCH : JCBಗೆ ಮತ ಕರ್ನಾಟಕಕ್ಕೆ ಹಿತಾ ಎಂದ YATNAL | YATNAL SPEECH |




