Chikkanayakanahalli Govt School : ಚಿಕ್ಕನಾಯಕನಹಳ್ಳಿ ಸರ್ಕಾರಿ ಶಾಲೆ: ಮೂಲಭೂತ ಸೌಕರ್ಯರಹಿತ ಶಾಲೆಯಲ್ಲಿ 60 ವಿದ್ಯಾರ್ಥಿಗಳು ಪರದಾಟ

Chikkanayakanahalli Govt School – ಚಿಕ್ಕನಾಯಕನಹಳ್ಳಿ ಸರ್ಕಾರಿ ಶಾಲೆ ಮೂಲಭೂತ ಸೌಕರ್ಯವಿಲ್ಲ
ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಿನೇ ದಿನೇ ಹಲವು ಕಾರಣಗಳಿಂದ ಮುಚ್ಚುವ ಹಂತಕ್ಕೆ ತಲುಪುತ್ತಿವೆ. “ಸರ್ಕಾರಿ ಶಾಲೆ ಉಳಿಸಿ” ಎಂಬ ಶ್ಲೋಗನ್ಗಳು ಎಲ್ಲೆಡೆ ಕೇಳಿ ಬರುತ್ತಿವೆ.ಸರ್ಕಾರವೂ ಶಾಲೆ ಉಳಿಸಲು ಕ್ರಮ ಕೈಗೊಂಡಿದೆ, ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಶಿಕ್ಷಣ ಇಲಾಖೆಯ ವೈಫಲ್ಯದ ಕಾರಣದಿಂದ ಹಲವಾರು ಶಾಲೆಗಳು ಇನ್ನೂ ಮುಚ್ಚಿನ ಹಂತದಲ್ಲಿವೆ.ಇದೇ ಕಾರಣಕ್ಕೆ ಸರ್ಕಾರವು ಹೇಗಾದರೂ ಮಾಡಿ ಸರ್ಕಾರಿ ಶಾಲೆಯನ್ನು ಉಳಿಸಲೇಬೇಕು ಅನ್ನೋ ಪಣ ತೊಟ್ಟಿದೆ. ಆದ್ರೆ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯವೋ.. ಇಲ್ಲ ಶಿಕ್ಷಣ ಇಲಾಖೆಯ ವೈಫಲ್ಯವೋ ಗೊತ್ತಿಲ್ಲ. ಇಂದಿಗೂ ತುಮಕೂರು ಜಲ್ಲೆಯ ಅನೇಕ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳು ಮುಚ್ಚುವ ಹಂತವನ್ನು ತಲುಪುತ್ತಿವೆ. ಇತ್ತ ಚಿಕ್ಕನಾಯಕನಹಳ್ಳಿಯಲ್ಲಿರುವ ಸೊಂಡೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಇದನ್ನೂ ಓದಿ : Kolar Girls Suicide Case : 7ನೇ ತರಗತಿ ಬಾಲಕಿಯರ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್
Chikkanayakanahalli Govt School -ಘಟನೆ ವಿವರಗಳು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೊಂಡೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಸುಮಾರು 60 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ವಿದ್ಯಾರ್ಥಿಗಳು ಶೌಚಾಲಯಕ್ಕೆ ಬಯಲಿಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಸೊಂಡೆನಹಳ್ಳಿ ಗ್ರಾಮವು ಗಣಿ ಬಾದಿತ ಪ್ರದೇಶವಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿಗೆ ಗಣಿಬಾದಿತ ಪ್ರದೇಶವನ್ನು ಅಭಿವೃದ್ಧಿ ಮಾಡಲು ಕೋಟ್ಯಾಂತರ ರೂಪಾಯಿ ಅನುದಾನ ಬಂದರೂ ಯಾವೊಬ್ಬ ಅಧಿಕಾರಿಗಳು ಕೂಡ ಸೊಂಡೆನಹಳ್ಳಿ ಗ್ರಾಮಕ್ಕೆ ಬಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲವಂತೆ.
Chikkanayakanahalli Govt School –ಅಧಿಕಾರಿಗಳ ನಿರ್ಲಕ್ಷ್ಯ
ಸೊಂಡೆನಹಳ್ಳಿ ಗ್ರಾಮವು ಗಣಿ ಬಾಧಿತ ಪ್ರದೇಶ, ಚಿಕ್ಕನಾಯಕನಹಳ್ಳಿ ತಾಲೂಕಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಂದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ಧಿ ಕೆಲಸ ಮಾಡುವುದಿಲ್ಲ.
ಸ್ಥಳೀಯರ ಆಕ್ರೋಶ
ಸ್ಥಳೀಯರು ಮತ್ತು ಮುಖ್ಯ ಶಿಕ್ಷಕರು ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಶಾಲೆಗೆ ಶೌಚಾಲಯ ನಿರ್ಮಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೇಳಿದ್ದಾರೆ. ಆದ್ರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಸರ್ಕಾರಿ ಶಾಲೆ ಉಳಿಸುವುದು ಮತ್ತು ಮೂಲಭೂತ ಸೌಕರ್ಯ ಒದಗಿಸುವುದು ತಕ್ಷಣದ ಅಗತ್ಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




