TUMAKURU : ತುಮಕೂರು ನಗರಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ಬೀಳುತ್ತಿದೆ. ಗಬ್ಬೆದ್ದ ಕಸದ ವಾಸನೆಯಿಂದಾಗಿ ಜನರು ಆನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

TUMAKURU : ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮೊಂಡರಾಗಿದ್ದಾರೆ ಅನ್ನಿಸುತ್ತೆ, ಪ್ರತಿನಿತ್ಯ ನಗರಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ಬೀಳುತ್ತಿದೆ. ಗಬ್ಬೆದ್ದ ಕಸದ ವಾಸನೆಯಿಂದಾಗಿ ಜನರು ಆನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಕಸ ಮುಕ್ತ ನಗರ, ಕ್ಲೀನ್ ಸಿಟಿ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ.
ನಿಮ್ಮ ಪ್ರಜಾಶಕ್ತಿ ಟಿವಿಯು ನಗರದಲ್ಲಿರುವ ಕಸದ ಸಮಸ್ಯೆ, ಅದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಪ್ರತಿನಿತ್ಯ ಸುದ್ದಿ ಬಿತ್ತರಿಸುತ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ತಮಗೆ ಏನೂ ಗೊತ್ತೆ ಇಲ್ವೆನೋ ಅನ್ನೋ ರೀತಿಯಾಗಿ ವರ್ತಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಇತ್ತ ತುಮಕೂರಿನ ರಾಜೀವ್ ಗಾಂಧಿ ನಗರ ಮೆಳೆಕೋಟೆ ಮುಖ್ಯರಸ್ತೆ ತುಂಬಾ ಗುಂಡಿಗಳು ಬಿದ್ದು, ರಸ್ತೆಯು ಹಾಳಾಗಿದ್ದು ಹಾಗೂ ಯುಜಿಡಿ ನೀರು ರಸ್ತೆಗೆ ಬರುತ್ತಿದ್ದು, ಸಾರ್ವಜನಿಕರು ದಿನನಿತ್ಯ ಸಂಚರಿಸಲು ಕಷ್ಟಪಡುವಂತಾಗಿದೆ.
ಈ ರಸ್ತೆಯಲ್ಲಿ ಸುಮಾರು ದಿನಗಳ ಹಿಂದೆಯಿಂದಲೂ ಕೂಡ ಗುಂಡಿಗಳು ಬಿದ್ದಿದ್ದು, ಮಳೆ ಬಂದರೆ ಗುಂಡಿಗಳ ತುಂಬಾ ನೀರು ತುಂಬಿ, ಗುಂಡಿ ಇದೆ ಎನ್ನುವುದು ಗೊತ್ತಾಗದೆ, ಎಷ್ಟೋ ಜನ ಗಾಡಿಗಳಿಂದ ಬಿದ್ದಿದ್ದಾರೆ. ಇದನ್ನು ಕಂಡ್ರು ಕೂಡ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕೂಡ ಇಲ್ಲ. ರಸ್ತೆ ತುಂಬಾ ಯುಜಿಡಿ ನೀರು ನಿಲ್ಲುತ್ತಿದೆ. ಮ್ಯಾನ್ ಹೋಲ್ ಸಾವಿಗೆ ಬಾಯ್ತೆರೆದು ಕಾಯ್ತಿವೆ. ಇದರ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೂ, ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : Supreme Court ಜಡ್ಜ್ ಗೆ Shoe ಎಸೆದ Lawyer ವಿರುದ್ದ ಕಠಿಣ ಕ್ರಮಕ್ಕೆ ಭೀಮ್ ಸೇನೆ ಆಗ್ರಹ!
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸಿ. ಕೊಳಚೆ ನಗರವಾಗಿ ಮಾರ್ಪಾಡಾಗುತ್ತಿರುವ ರಾಜೀವ್ ಗಾಂಧಿ ನಗರ, ಮೆಳೆಕೋಟೆ ಮುಖ್ಯ ರಸ್ತೆಯನ್ನು ಹಾಗೂ ಅಲ್ಲಿರುವ ಯುಜಿಡಿ ಸಮಸ್ಯೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
MUST WATCH: TUMKUR |ರಾಜೀವ್ ಗಾಂಧಿ ನಗರದಲ್ಲಿ ಕಸವೋ..ಕಸ.. -ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ನಿವಾಸಿಗಳು | TUMKUR NEWS |




