Supreme Court Issue : ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ರವರಿಗೆ ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮಕ್ಕೆ ಭೀಮ್ ಸೇನೆಯ ವತಿಯಿಂದ ಚಿಕ್ಕನಾಯಕನಹಳ್ಳಿಯಲ್ಲಿ ಆಗ್ರಹ!.

Supreme Court Issue : ಭಾರತದ Sepreme Courtನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಅವರ ಮೇಲೆ October 6 ರಂದು ನ್ಯಾಯಾಲಯದ ಕಲಾಪದ ವೇಳೆ ವಕೀಲನೊಬ್ಬ Shoe ಎಸೆದಿದ್ದು, ಈ ಘಟನೆಯಿಂದ ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಕರ್ನಾಟಕ ಭೀಮ್ ಸೇನೆ ತಾಲೂಕು ಸಮಿತಿಯ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ಇಂದು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮೂಲಕ Central Home Ministerಗೆ ಸಂಘಟನೆ ಪರವಾಗಿ ಮನವಿ ಸಲ್ಲಿಸಲಾಯ್ತು. ಇನ್ನು ಮನವಿಯಲ್ಲಿ “ಸಂವಿಧಾನ ವಿರೋಧಿ ಮತ್ತು ಜಾತಿವಾದಿ ಮನೋಭಾವದ ಹಿರಿಯ ವಕೀಲ ಕಿಶೋರ್ ಕುಮಾರ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳಿಸಬೇಕು, ಇಲ್ಲ ಗಡಿಪಾರು ಮಾಡಬೇಕು. ಇಂತಹ ಕೃತ್ಯಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಮತ್ತು ಸಂವಿಧಾನವನ್ನು ದಿಕ್ಕು ತಪ್ಪಿಸುವಂತಹ ಷಡ್ಯಂತ್ರದ ಭಾಗವಾಗಿದೆ” ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.
READ THIS : Belgaum Murder News : ಬೆಳಗಾವಿ ಹತ್ಯೆ ಪ್ರಕರಣ
ಇನ್ನು ಈ ವಕೀಲನ ಹಿಂದಿರುವ ವ್ಯಕ್ತಿಗಳು ಯಾರು ಎಂಬುದರ ಕುರಿತು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನಿಖರ ಮಾಹಿತಿ ನಡೆಸಬೇಕು ಎಂದು ಸಂಘಟನೆಗಳು ಆಗ್ರಹಿಸಿದೆ. ಅಲ್ದೇ ಮಾಧ್ಯಮಗಳಲ್ಲಿ Comment ಮಾಡುತ್ತಿರುವ ಹಾಗೂ ಆರೋಪಿಗೆ ಬೆಂಬಲ ವ್ಯಕ್ತಪಡಿಸುತ್ತ ಇರುವವರ ಮೇಲೂ ಪ್ರಕರಣ ದಾಖಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಒಂದು ವೇಳೆ “ಕೇಂದ್ರ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ, ದೆಹಲಿಯ ಜಂತರ್ ಮಂತರ್ನಲ್ಲಿ ರಾಷ್ಟ್ರಮಟ್ಟದ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು,” ಎಂದರು.
WATCH NOW :VOLLEYBALL COURT ನಿರ್ಮಾಣದಲ್ಲಿ ಅಕ್ರಮ ಅನುದಾನ ಬಂದಿದ್ರು ನಿರ್ಮಾಣ ಮಾತ್ರ ಆಗ್ತಿಲ್ಲ
ಈ ವೇಳೆ ನವೀನ್ ಲಕ್ಕೇನಹಳ್ಳಿ, ಬಸವರಾಜು ಹೊಸಹಳ್ಳಿ, ಶಶಿಕುಮಾರ್ ಯಲ್ಲದಕೆರೆ, ನಾಗರಾಜು ತೀರ್ಥಪುರ, ಗೋವರ್ಧನ್ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.




