
PROTECTION OF COWS IN MADHUGIRI : ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 25 ರಿಂದ 30 ಗೋವುಗಳನ್ನ, ಖಚಿತ ಮಾಹಿತಿ ಮೇರೆಗೆ ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿರುವ ಘಟನೆ ಮಧುಗಿರಿಯಲ್ಲಿ ನಡೆದಿದ್ದು, ಅಲ್ಲದೆ ಪೊಲೀಸ್ ಠಾಣೆಗೆ ಹಸುಗಳನ್ನ ಕರೆತಂದು 2 ಗಂಟೆಗಳಾದ್ರೂ ಪೊಲೀಸರು CASE ದಾಖಲಿಸಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು.. ಚಿತ್ರದುರ್ಗದ ಕಡೆಯಿಂದ ಬೆಳಗಿನ ಜಾವ ಸುಮಾರು 5.30 ರಲ್ಲಿ ಕಂಟೇನರ್ ವಾಹನದಲ್ಲಿ ಗೋವುಗಳು ಉಸಿರಾಡಲು ಸಹ ಕಷ್ಟವಾಗುವ ರೀತಿಯಲ್ಲಿ ತುಂಬಿಕೊಂಡು, ಕಸಾಯಿ ಖಾನೆಗೆ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಮೇರೆಗೆ ಬಜರಂಗದಳ ಕಾರ್ಯಕರ್ತರಾದ ಜಗದೀಶ್, ಗಂಗರಾಜು ಹಾಗೂ ಲಿಖಿತ್ ಕುಮಾರ್ ಹಾಗೂ ನಾಗೇಶ್ ಅವರು ಕಂಟೇನರ್ ಲಾರಿಯನ್ನ ತಡೆದು, ಗೋವುಗಳ ರಕ್ಷಣೆ ಮಾಡಿದ್ದಾರೆ. ಅಲ್ದೇ ಗೋವಗಳನ್ನ ರಕ್ಷಣೆ ಮಾಡಿ ಪೊಲೀಸ್ ಠಾಣೆಗೆ ಕರೆತಂದ್ರು CASE ದಾಖಲಿಸಿಲ್ಲ. ಪೋನ್ ಮಾಡಿದ್ರೂ ರಿಸೀವ್ ಮಾಡ್ತಿಲ್ಲ, ಆ ಕಂಟೇನರ್ ನಲ್ಲಿ ಗೋವುಗಳು ಉಸಿರಾಡಲು ಸಹ ಕಷ್ಟವಾಗ್ತಿದ್ರೂ, ಕಂಟೇನರ್ ನಲ್ಲೇ ಉಳಿಸಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಹನುಮಂತರೆಡ್ಡಿ ಆರೋಪಿಸಿದರು.
ಇನ್ನು ತಾಲ್ಲೂಕು BJP ಪ್ರದಾನ ಕಾರ್ಯದರ್ಶಿ ರಮೇಶ್ ಮಾತನಾಡಿ, 112 ಸಹಾಯವಾಣಿ ಮೂಲಕ ಚಿತ್ರದುರ್ಗ ದಿಂದ ಆಕ್ರಮವಾಗಿ ಸಾಗಿಸ್ತಿದ್ದ ಗೋವುಗಳನ್ನ ರಕ್ಷಣೆ ಮಾಡಿದ್ದು, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ರೂ ಕೂಡ, ಹಸುಗಳನ್ನ ಕಸಾಯಿ ಖಾನೆಗೆ ಸಾಗಣೆ ಮಾಡುತ್ತಲ್ಲೇ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಇನ್ನು ಮಾಹಿತಿ ತಿಳಿದು ಪೊಲೀಸ್ Circle Inspector ಹನುಮಂತರಾಯಪ್ಪ, SUB Inspector ಮುತ್ತುರಾಜ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಧುಗಿರಿ ಶ್ರೀ ದಂಡಿನ ಮಾರಮ್ಮ ದೇವಸ್ಥಾನದ ಬಳಿ, ಹಸುಗಳನ್ನು ಬಂದ ಮುಕ್ತಗೊಳಿಸಿದ್ದು, ಕಂಟೇನರ್ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.




