ನಡು ರಸ್ತೆಯಲ್ಲಿ ರೀಲ್ಸ್ ಮಾಡಿದ್ದ Rajath ವಿರುದ್ಧ FIR

ಬಿಗ್ ಬಾಸ್ ಖ್ಯಾತಿಯ ರಜತ್ನನನ್ನು ವಿವಾದಗಳು ಯಾಕೋ ಬಿಡುತ್ತಿಲ್ಲ. ಒಂದರ ಹಿಂದೊಂದು ವಿವಾದಗಳು ಅವರನ್ನು ಸುತ್ತಿಕೊಳ್ಳುತ್ತಲೇ ಇವೆ. ಒಮ್ಮೆ ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದ ರಜತ್ ಅದಾದ ಮೇಲೂ ಮತ್ತೊಮ್ಮೆ ಹೀಗೆ ರೀಲ್ಸ್ ಮಾಡಿ ಪೊಲೀಸರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಪೆಟ್ರೋಲ್ ಬಾಂಬ್ ಸ್ಫೋಟಿಸಿ ಅಪಾಯಕಾರಿ ಸ್ಟಂಟ್
ರಜತ್ ಕಿಶನ್, ಸೋಶಿಯಲ್ ಮೀಡಿಯಾ ರೀಲ್ಸ್ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಈ ಕೃತ್ಯಕ್ಕಾಗಿ ಕಗ್ಗಲೀಪುರ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಜನರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ FIR ದಾಖಲಿಸಿದ್ದಾರೆ.

Rajath ವಿರುದ್ಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ FIR
ಇನ್ನು ಈ ಪೆಟ್ರೋಲ್ ಬಾಂಬ್ ಸ್ಫೋಟದಿಂದ ಸಾರ್ವಜನಿಕರಿಗೆ ಆತಂಕ, ವಾಹನ ಸವಾರರಿಗೆ ತೊಂದರೆ, ರಸ್ತೆಯು ಕಪ್ಪಾಗಿದ್ದು, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸರು Rajath ವಿರುದ್ಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ FIR ದಾಖಲಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಜತ್ಗೆ ನೋಟೀಸ್ ನೀಡಿ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ.
READ THIS : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು – ತಾಯಿ, ಮಗು ಸಾವು

ನೊಟೀಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ತಯಾರಿ
ರಜತ್ ವಿರುದ್ಧ ಕಗ್ಗಲೀಪುರ ಠಾಣೆಯಲ್ಲಿ ಕಾನೂನು ಕುಣಿಕೆ ಬಿಗಿಯಾಗಿದೆ.
BNS 287, 292: ಸಾರ್ವಜನಿಕರಿಗೆ ತೊಂದರೆ ಕೊಡುವುದು ಮತ್ತು ನಿರ್ಲಕ್ಷ್ಯತನದ ವರ್ತನೆ.
IMV Act 177, 194D: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ಸಂಚಾರಿ ನಿಯಮಗಳ ಉಲ್ಲಂಘನೆ.
PDPP Act 1984: ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ ಗಂಭೀರ ಆರೋಪ.
ಅದೇನೆ ಆಗಲಿ, ರೀಲ್ಸ್ ಮಾಡಿ ಪದೇ ಪದೇ ಪೇಚಿಗೆ ರಜತ್ ಸಿಲುಕುತ್ತಿದ್ದು, ಇದ್ರಿಂದ ಹೇಗೆ ಪಾರಾಗ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

MUST WATCH : ಕಾಲು ಜಾರಿ ಕೆರೆಗೆ ಬಿದ್ದ ಬಾಲಕ ಸಾ* – ಮಗನನ್ನು ಕಳೆದುಕೊಂಡ ಹೆತ್ತವರ ರೋಧನೆ




