Hassan : ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು – ಒಂದೂವರೆ ವರ್ಷದ ಮಗು ಸೇರಿ ತಾಯಿ ಸಾವು

ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರೊಂದು ನೀರಿಲ್ಲದ ಹೇಮಾವತಿ ನಾಲೆಗೆ ಬಿದ್ದಿದೆ. ಇದ್ರ ಪರಿಣಾಮ ತಾಯಿ ಹಾಗೂ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಧಾರುಣ ಘಟನೆ Hassan ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಬಳಿ ನಡೆದಿದೆ.
READ THIS : Pre wedding ಶೂಟ್ಗೆ ಹೋಗುವಾಗ ಅಪಘಾತ – ವರನ ಸಾವು..!!
ಒಂದೂವರೆ ವರ್ಷದ ಮಗು ಸೇರಿ ತಾಯಿ ಸಾವು
ಪ್ರಿಯಾಂಕ ಮತ್ತು ಅವರ ಮಗು ವೈಭವ್ ಮೃತ ದುರ್ದೈವಿಗಳಾಗಿದ್ದಾರೆ. ದೇವನಹಳ್ಳಿ ಮೂಲದ ಕುಟುಂಬವು ಕಾರಿನಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಮಲ್ಲನಘಟ್ಟದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಹೇಮಾವತಿ ನಾಲೆಗೆ ಬಿದ್ದಿದೆ.

Hassan – ಪೊಲೀಸರು ಭೇಟಿ, ಪರಿಶೀಳನೆ
ಇನ್ನು ಈ ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
MUST WATCH : ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಡೈಲಿ ಟಿಟಿಡಿಗೆ ಎಷ್ಟು ತುಪ್ಪ ಹೋಗುತ್ತೆ ಗೊತ್ತಾ




