ಅಮೆರಿಕಾದ ಶ್ವೇತ ಭವನದಲ್ಲಿ ಗುಂಡಿನ ಸದ್ದು – ಭಾಷಣ ನಿಲ್ಲಿಸಿ ಬಂಕರ್ನತ್ತ ಓಡಿದ Trump

ಅಮೆರಿಕದ ರಾಜಧಾನಿ ವಾಷಿಂಗ್ಟನ್ನ ಶ್ವೇತಭವನದಲ್ಲಿ ನಿನ್ನೆ ರಾತ್ರಿ ವಾರ್ಷಿಕ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಆದರೆ ಈ ಕೂಟದಲ್ಲಿ ಐದರಿಂದ ಎಂಟು ಬಾರಿ ಗುಂಡಿನ ಸದ್ದು ಕೇಳಿ ಬಂದಿತ್ತು. ಅಧ್ಯಕ್ಷ Trump ಭಾಷಣಕ್ಕೂ ಮುನ್ನವೇ ಗುಂಡಿನ ಸದ್ದು ಕೇಳಿ ಬಂದಿದ್ದು, ನೂರಾರು ಪತ್ರಕರ್ತರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ರಾಜತಾಂತ್ರಿಕರು ಆತಂಕಕ್ಕೆ ಒಳಗಾದರು. ಕೂಡಲೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಬಂಕರ್ನತ್ತ ಕೊಂಡೊಯ್ದರು.
ಸದಸ್ಯರು ಸಂಪೂರ್ಣ ಸುರಕ್ಷಿತವಾಗಿದ್ದಾರೆ
ಇನ್ನು ಗುಂಡಿನ ದಾಳಿಯಲ್ಲಿ ಅದೃಷ್ಟವಶಾತ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಅಧ್ಯಕ್ಷರು ಮತ್ತು ಅವರ ಸಂಪುಟದ ಸದಸ್ಯರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದರು.

READ THIS : ಟಿಸಿಎಸ್ 10ಕೆ ಮ್ಯಾರಥಾನ್ಗೆ ಡಿ.ಕೆ. ಶಿವಕುಮಾರ್ ಚಾಲನೆ
ಗುಂಡು ಹಾರಿಸಿದವನ ಫೋಟೋ ರಿಲೀಸ್ ಮಾಡಿದ Trump
ಇನ್ನು ಅಮೆರಿಕಾದ ವೈಟ್ ಹೌಸ್ನಲ್ಲಿ ಗುಂಡಿನ ದಾಳಿ ನಡೆಸಿದ್ದ ಆರೋಪಿಯ ಫೋಟೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿವೀಲ್ ಮಾಡಿದ್ದಾರೆ. ನೂರಾರು ಅತಿಥಿಗಳು ಸೇರಿದ್ದ ಹೋಟೆಲ್ ಹೊರಗಿನ ಸ್ಕ್ರೀನಿಂಗ್ ಪ್ರದೇಶದಲ್ಲಿ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್ನ ಮೊದಲ ಚಿತ್ರ ಹೊರಬಂದಿದ್ದು, ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ.

MUST WATCH : ಚಾಮುಂಡಿ ದೈವಕ್ಕೆ ಅವಮಾನ CASE – ಕ್ಷಮೆ ಕೇಳಿದ ನಟ RANVEER SINGH..!




