Rajkumar ಜನ್ಮದಿನದ – ‘ಅಭಿಮಾನಿಗಳೇ ದೇವರು’ ಎಂದ ಅಣ್ಣಾವ್ರಿಗೆ ಗಣ್ಯರ ನಮನ

ಕರ್ನಾಟಕ ರತ್ನ, ವರನಟ ಡಾ. ರಾಜ್ಕುಮಾರ್ ಅವರ ಇಂದು 97 ನೇ ಜನ್ಮ ದಿನ. ರಾಜ್ಕುಮಾರ್ ಅವರು ನಮ್ಮ ಜೊತೆಗೆ ಇಲ್ಲ ಅನ್ನೋ ಬೇಸರ ಇದ್ದರೂ ಕೂಡ ಅವರು ತಮ್ಮ ಸಿನಿಮಾಗಳ ಮೂಲಕ ಜೀವಂತವಾಗಿದ್ದಾರೆ. ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಅಣ್ಣಾವ್ರ ಸಮಾಧಿ ಹತ್ತಿರ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ಕನ್ನಡ ನಾಡಿನ ವರನಟನನ್ನು ನೆನೆದ ರಾಜಕೀಯ ಗಣ್ಯರು
ಇಂದು Rajkumar ಅವರ ಜನ್ಮದಿನದ ನೆನಪಿಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಗಣ್ಯರು ಸ್ಮರಿಸಿದ್ದಾರೆ.

ನಡೆ – ನುಡಿಯಲ್ಲೂ ರಾಜಕುಮಾರ
ನಟನಾಗಿ, ಗಾಯಕನಾಗಿ ಮಾತ್ರವಲ್ಲ ಕನ್ನಡ ನಾಡು, ನುಡಿಯ ಬಗೆಗೆ ರಾಜ್ಕುಮಾರ್ ಅವರಿಗಿದ್ದ ಪ್ರೀತಿ – ಬದ್ಧತೆಗೆ ಅವರೇ ಸಾಟಿ. ರಾಜ್ಕುಮಾರ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಅವರ ಸರಳತೆ, ಸಜ್ಜನಿಕೆ, ಅಕ್ಕರೆಯ ಮಾತುಗಳು. ಯಶಸ್ಸು, ಖ್ಯಾತಿ, ಸಂಪತ್ತು ಈ ಎಲ್ಲವೂ ಯಥೇಚ್ಛವಾಗಿ ಬಂದರೂ ರಾಜಣ್ಣನ ವ್ಯಕ್ತಿತ್ವ ಮಾತ್ರ ಬದಲಾಗಲಿಲ್ಲ, ಅವರು ಸಮಾಜಕ್ಕೆ ಮತ್ತಷ್ಟು ಹತ್ತಿರವಾಗುತ್ತಾ ಹೋದರು, ಸುತ್ತಲಿನ ಜನರನ್ನು ಹೆಚ್ಚು ಪ್ರೀತಿಸಲಾರಂಭಿಸಿದರು.
ನಾಯಕ, ಖಳನಾಯಕ, ಪೋಷಕ ಹೀಗೆ ಪ್ರತಿಯೊಂದು ಪಾತ್ರಕ್ಕೂ ಜೀವತುಂಬುತ್ತಿದ್ದ ಅವರು ತಮ್ಮ ಅತ್ಯದ್ಭುತ ನಟನೆ, ಸುಮಧುರ ಕಂಠಸಿರಿಯ ಮೂಲಕ ಹಲವು ದಶಕಗಳ ಕಾಲ ಕನ್ನಡದ ಸಿನಿಪ್ರಿಯರನ್ನು ರಂಜಿಸಿದವರು.ನಡೆ – ನುಡಿಯಲ್ಲೂ ರಾಜಕುಮಾರನಾಗಿ ಬಾಳಿದ ಮಹಾನ್ ಚೇತನಕ್ಕೆ ನನ್ನ ಅಭಿಮಾನಪೂರ್ವಕ ನಮನಗಳು ಎಂದು CM ತಮ್ಮ ಎಕ್ಸ್ನಲ್ಲಿ ಬರೆಉಕೊಂಡಿದ್ದಾರೆ.
ಅಣ್ಣಾವ್ರು ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ
ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ, ಸರಳತೆಯ ಸಾಕಾರಮೂರ್ತಿ ಹಾಗೂ ಅಭಿಮಾನಿಗಳನ್ನೇ ದೇವರು ಎಂದು ನಂಬಿದ ಡಾ. ರಾಜ್ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ತಮ್ಮ ಅದ್ಭುತ ಅಭಿನಯ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ಅಣ್ಣಾವ್ರು ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ.
READ THIS : DRI ಬಳಿಕ ನಟಿ ರನ್ಯಾರಾವ್ಗೆ ಎದುರಾಯ್ತು ED ಸಂಕಷ್ಟ..!
MUST WATCH : ತುಮಕೂರಿನಲ್ಲಿ ಇಂದಿನಿಂದ NATIONAL ATHLETICS – ಕ್ರೀಡಾಕೂಟ ಉದ್ಘಾಟಿಸಿದ ಸಚಿವ DR.G.PARAMESHWAR




