ಸ್ಯಾಂಡಲ್ವುಡ್ ನಟಿ Ranya Rao ಗೆ ಬೆನ್ನುಬಿಡದ ಗೋಲ್ಡ್ ಸ್ಮಗ್ಲಿಂಗ್ ಕೇಸ್.

ಸುಮಾರು ನೂರಾರು ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೈಲಿನಿಂದ ಹೊರಬಂದ ಒಂದೇ ದಿನಕ್ಕೆ ED ಅಧಿಕಾರಿಗಳು ರನ್ಯಾಗೆ ಶಾಕ್ ಕೊಟ್ಟಿದ್ದಾರೆ.

ಸ್ಯಾಂಡಲ್ವುಡ್ ನಟಿಗೆ ED ಸಂಕಷ್ಟ!
DRI ಬಳಿಕ ಈಗ ನಟಿ ರನ್ಯಾ ರಾವ್ಗೆ ಇ.ಡಿ ಸಂಕಷ್ಟ ಎದುರಾಗಿದ್ದು, ಈಗಾಗಲೇ ರನ್ಯಾ ರಾವ್ ಅವರ ಮನೆಯ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಈ ಪ್ರಕರಣದ ಟ್ರಯಲ್ ಅನ್ನು ಅಧಿಕಾರಿಗಳು ಪ್ರಾರಂಭಿಸಿದ್ದು, ಕಾನೂನು ಕ್ರಮಗಳು ಮುಂದುವರಿಯುತ್ತಿವೆ.
READ THIS : BJP ಮಾಜಿ ಮುಖಂಡನ ಪುತ್ರನಿಗೆ ಹೈಕೋರ್ಟ್ ಚಾಟಿ

Ranya Rao ಜೊತೆ ನಾಲ್ವರು ಆರೋಪಿಗಳಿಗೂ ಸಹ ವಿಚಾರಣೆ
ಮೊನ್ನೆ ತಾನೇ ಜೈಲಿನಿಂದ ಹೊರಬಂದ ರನ್ಯಾ ರಾವ್ ಈಗ ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ಚಾರ್ಜ್ ಫ್ರೇಮ್ ಪ್ರಕ್ರಿಯೆಯಲ್ಲೂ ರನ್ಯಾ ರಾವ್ ಭಾಗವಹಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರಾತಿ ನೀಡಲಾಗಿದೆ. ಇನ್ನು ಈ ಪ್ರಕರಣದಲ್ಲಿ ರನ್ಯಾ ರಾವ್ ಜೊತೆಗೆ ಇನ್ನೂ ನಾಲ್ವರು ಆರೋಪಿಗಳು ಸಹ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
MUST WATCH : HIGH COURT ನಲ್ಲಿ PARAMಗೆ ಮೊದಲ ಜಯ – FIR ದಾಖಲಿಸುವ ಆದೇಶಕ್ಕೆ ತಡೆ




