BJP ಮಾಜಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್ – ಹೈಕೋರ್ಟ್ನಿಂದ ಮಹತ್ವದ ಆದೇಶ

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ವಂಚಿಸಿದ್ದ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಮೇಲಿನ ಪ್ರಕರಣ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೃಷ್ಣ ಜೆ ರಾವ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ
ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ನಡೆಸಿದ್ದು, ಷರತ್ತಿನ ಮೇರೆಗೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.
READ THIS : ಒಂದು ವಾರ ತಾಪಮಾನ ಹೆಚ್ಚಳ – ಹವಾಮಾನ ಇಲಾಖೆ ಮುನ್ಸೂಚನೆ!
ಮಗು ಹಾಗೂ ತಾಯಿಗೆ ಮಾಸಿಕ 75 ಸಾವಿರ ರೂಪಾಯಿ ಪಾವತಿಸಲು ಆದೇಶ
ಆರೋಪಿಯ ದೈಹಿಕ ಸಂಪರ್ಕದಿಂದ ಯುವತಿಗೆ ಈಗ 10 ತಿಂಗಳ ಮಗು ಇರುವ ಹಿನ್ನೆಲೆಯಲ್ಲಿ, ತಾಯಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ.
ಮುಂದಿನ ಆದೇಶದವರೆಗೂ ಮಗುವಿನ ಹಾಗೂ ತಾಯಿಯ ನಿರ್ವಹಣೆಗೆ ಮಾಸಿಕ 75 ಸಾವಿರ ರೂಪಾಯಿ ಪಾವತಿಸಲು ಅರ್ಜಿದಾರ ಕೃಷ್ಣ ಜೆ. ರಾವ್ಗೆ ಹೈಕೋರ್ಟ್ ಸೂಚನೆ ನೀಡಿದೆ.

ಮಗುವಿನ ತಂದೆಯಾದ ಮೇಲೆ ಮದುವೆ ಆಗುವುದು ಉತ್ತಮ
ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ ಕೃಷ್ಣ ಜೆ.ರಾವ್ ಪರ ವಾದ ಮಂಡಿಸಿದ್ದ ವಕೀಲ ಪಿ.ಪಿ.ಹೆಗ್ಡೆ, 7 ವರ್ಷಗಳ ಪ್ರೀತಿ ಇತ್ತು, ಕ್ರಿಮಿನಲ್ ಕೇಸ್ ನಿಂದಾಗಿ ರಾಜಿಯಾಗಿಲ್ಲ.
ರಾಜಕೀಯ ವಿರೋಧಿಗಳು ಆರೋಪಿ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್ನಲ್ಲೂ ಆರೋಪಿಗಳನ್ನಾಗಿಸಿದ್ದಾರೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಗುವಿಗೆ ತಂದೆಯಾಗಿರುವ ಹಿನ್ನೆಲೆಯಲ್ಲಿ ಮದುವೆಯಾಗುವುದು ಉತ್ತಮ. ಜೊತೆಗೆ ಯುವತಿ ಮತ್ತು ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ ಎಂದು ಹೇಳಿದ ಪೀಠ, ಜೀವನಾಂಶವಾಗಿ ಮಾಸಿಕ 10 ಸಾವಿರ ರೂ. ನೀಡಲು ಸಿದ್ಧರಿದ್ದೀರಾ ಎಂದು ಆರೋಪಿ ಪರ ವಕೀಲರನ್ನು ಪ್ರಶ್ನಿಸಿ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿತ್ತು.

MUST WATCH : ಶಾಲಾ ಆವರಣದಲ್ಲಿ ಇದೆಂಥಾ ಘಟನೆ ಶಾಲೆಯ ಮುಂದೆಯೇ ನಡೀತಾ ಪ್ರಾಣಿ ಬಲಿ




